- ದೇಶದಲ್ಲಿ 3 ದಶಕಗಳ ನಂತರ ಅಲ್ಯುಮೀನಿಯಂ ಅದಿರು ಪತ್ತೆ
- ಉಕ್ಕಿನಡ್ಕದಲ್ಲಿ ಪತ್ತೆಯಾಯ್ತು ಅತೀ ದೊಡ್ಡ ನಿಕ್ಷೇಪ
- 44.4% ಅಲ್ಯೂಮಿನಿಯಂ ಆಕ್ಸೈಡ್, ಸಿಲಿಕಾನ್ 5.17, ಫೆರಿಕ್ ಆಕ್ಸೈಡ್ 22.6 ಮತ್ತು ಟೈಟಾನಿಯಂ ಡೈಆಕ್ಸೈಡ್ 1.76 ಅಂಶ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಭಾಗದಲ್ಲಿ ಭಾರೀ ಪ್ರಮಾಣದ ಅಲ್ಯೂಮಿನಿಯಂ ನಿಕ್ಷೇಪ ಪತ್ತೆಯಾಗಿದೆ. ಈ ಹಿನ್ನಲೆ ಗಣಿಗಾರಿಕೆಗೆ ಹೆಚ್ಚಿನ ಅವಕಾಶವಿದೆ ಎಂದು ಕೇಂದ್ರ ವರದಿ ತಿಳಿಸಿದೆ. ಈಗಾಗಲೇ ಗಣಿ ಕೇಂದ್ರಿಯ ಗಣಿ ವಿಜ್ಞಾನ ಇಲಾಖೆ ಸಮೀಕ್ಷೆ ಕೈಗೊಂಡಿದ್ದು, ಗಣಿಗಾರಿಕೆ ನಡೆಸಲು ಕೇರಳ ಸರ್ಕಾರದ ಮೊರೆ ಹೋಗಿದ್ದಾಗಿ ಕೇರಳ ಸುದ್ದಿ ಮಾಧ್ಯಮಗಳು ವರದಿ ಪ್ರಕಟಿಸಿದೆ.
ಕೇರಳ ರಾಜ್ಯದ ಗಡಿ ಭಾಗವಾಗಿರುವ ಬದಿಯಡ್ಕದ ಉಕಿನಡ್ಕದಲ್ಲಿ ಅಲ್ಯೂಮಿನಿಯಂ ಸೇರಿದಂತೆ ವಿವಿಧ ಖನಿಜಗಳು ವಿಶಾಲವಾದ ಕಲ್ಲುಬಂಡೆಗಳ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇದರಿಂದ ಈ ಭಾಗದಲ್ಲಿ ಗಣಿಗಾರಿಕೆಯ ಉಪಯೋಗ ಹಾಗೂ ದುಷ್ಟರಿಣಾಮಗಳ ಬಗ್ಗೆ ಚರ್ಚೆ ತೀವ್ರಗೊಂಡಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಪ್ರಾಥಮಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಅನುಮತಿಗಾಗಿ ಕೇರಳ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆ. ಉಕಿನಡ್ಕ ವಿಭಾಗವನ್ನು ಒಳಗೊಂಡಿರುವ ಮಂಜೇಶ್ವರಂ ತಾಲೂಕಿನ ಬದಿಯಡ್ಕ ಮತ್ತು ಎಣ್ಮಕಜೆ ಗ್ರಾಮಗಳಲ್ಲಿ 2.85 ಚದರ ಕಿಲೋಮೀಟರ್ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಪ್ರಸ್ತಾಪಿಸಲಾಗಿದೆ.
ನಾಲ್ಕು ಮೀಟರ್ ಆಳದಲ್ಲಿ ಎರಡು ಕೋಟಿ ಟನ್ ಕಲ್ಲು ಸಿಗಲಿದೆ. 44.4 ರಷ್ಟು ಅಲ್ಯೂಮಿನಿಯಂ ಆಕ್ಸೈಡ್ ಇರುವುದು ಕಂಡುಬಂದಿದೆ. ಅದರೊಂದಿಗೆ ಸಿಲಿಕಾನ್ 5.17, ಫೆರಿಕ್ ಆಕ್ಸೈಡ್ 22.6 ಮತ್ತು ಟೈಟಾನಿಯಂ ಡೈ ಆಕ್ಸೈಡ್ 1.76 ಅಂಶ ಕಂಡುಬಂದಿದೆ.
ಪ್ರಸ್ತುತ, ಅತಿ ದೊಡ್ಡ ಅಲ್ಯೂಮಿನಿಯಂ ಗಣಿಗಾರಿಕೆ ಕಂಪನಿ, ವೇದಾಂತ ಗ್ರೂಪ್, ಒಡಿಶಾದಿಂದ ಅಗೆದ ಮಣ್ಣಿನಲ್ಲಿ ಶೇಕಡಾ 40ರಷ್ಟಯ ಅಲ್ಯೂಮಿನಿಯಂ ಹೊಂದಿತ್ತು. ಆದರೆ ಇದಕ್ಕಿಂತಲೂ ಹೆಚ್ಚು ಉಕ್ಕಿನಡ್ಕದಲ್ಲಿ ಪತ್ತೆಯಾಗಿದೆ. ಜಿಎಸ್‌ಐ ಉಪ ನಿರ್ದೇಶಕ ಡಾ. ಅಂಬಿಲಿ, ಗಣಿ ಮತ್ತು ಭೂವಿಜ್ಞಾನ ನಿರ್ದೇಶಕ ಡಾ. ಹರಿಕುಮಾರ್ ಮತ್ತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಕೊಲ್ಲಂ ಚವರದಲ್ಲಿ ನಡೆಯುತ್ತಿರುವ KMML ಮತ್ತು ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್‌ನ ಗಣಿಗಾರಿಕೆಯ ಮಾದರಿಯಲ್ಲಿ ಉಕ್ಕಿನಡ್ಕದಲ್ಲಿ ಕೂಡ ರೂಪುಗೊಳ್ಳಲಿದೆ. ಸರ್ವೆ ಪ್ರದೇಶದಲ್ಲಿ ಖಾಸಗಿ ಜಮೀನಿನಲ್ಲಿ 284 ಮನೆಗಳಿವೆ. ಜಾಗ ಬಿಟ್ಟುಕೊಟ್ಟವರಿಗೆ ಸೂಕ್ತ ಹಣದ ಸಹಾಯ ಅಥವಾ ಪುನರ್ವಸತಿ ಜಮೀನು ಸಿಗಲಿದೆ. ಕಲ್ಲು ತೆಗೆದ ನಂತರ ಅದನ್ನು ಭರ್ತಿ ಮಾಡಿ ಕೃಷಿ ಭೂಮಿ ಎಂದು ಹಿಂತಿರುಗಿಸಲಾಗುತ್ತದೆ. ಭವಿಷ್ಯದ ವಸತಿ ಯೋಜನೆಗಳಿಗೆ ಈ ಭೂಮಿಗೆ ಆದ್ಯತೆ ನೀಡಲಾಗುವುದು. ಗಣಿಗಾರಿಕೆ ಪರವಾನಗಿಗಳನ್ನು ರಾಷ್ಟ್ರೀಯ ಸಾರ್ವಜನಿಕ ಹರಾಜಿನ ಮೂಲಕ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೈಸರ್ಗಿಕ ಖನಿಜ ಬಾಕ್ಸೈಟ್ ಅಲ್ಯೂಮಿನಿಯಂ ಮತ್ತು ಸಿಮೆಂಟ್ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುವ ನೈಸರ್ಗಿಕ ಖನಿಜವಾಗಿದೆ. ಕಳೆದ 3 ದಶಕಗಳಿಂದ ದೇಶದಲ್ಲಿ ಎಲ್ಲಿಯೂ ದೊಡ್ಡ ಪ್ರಮಾಣದ ಬಾಕ್ಸೈಟ್ ನಿಕ್ಷೇಪಗಳು ಪತ್ತೆಯಾಗಿಲ್ಲ. ಆದ್ದರಿಂದ, ಕನಿಷ್ಠ ಸಣ್ಣ ಪ್ರಮಾಣದಲ್ಲಿ, ಮೀಸಲು ಇರುವ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಲು ನಿರ್ಧರಿಸಲಾಯಿತು. ಖನಿಜ ಪರಿಶೋಧನಾ ನಿಗಮ ಲಿಮಿಟೆಡ್, ಕಾಸರಗೋಡು ಸೇರಿದಂತೆ ದೇಶದ 30 ಸ್ಥಳಗಳನ್ನು ಬಾಕ್ಸೈಟ್ ಗಣಿಗಾರಿಕೆಗೆ ಸೂಕ್ತವೆಂದು ಗುರುತಿಸಿದೆ.