ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇತ್ತೀಚೆಗೆ ತಮ್ಮ ಪತ್ನಿ ಅಕ್ಷತಾ ಮೂರ್ತಿ ಮತ್ತು ಅವರ ಪೋಷಕರು, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರೊಂದಿಗೆ ಕರ್ನಾಟಕದ ಬೆಂಗಳೂರಿನಲ್ಲಿರುವ ಪೂಜ್ಯ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು.
ಮಂಗಳವಾರ ಬೆಂಗಳೂರಿಗೆ ಪತ್ನಿ ಜೊತೆ ಆಗಮಿಸಿದ್ದ ಸುನಾಕ್ ಅವರು ಬಳಿಕ ರಾಘವೇಂದ್ರ ಮಠಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದಿದ್ದಾರೆ. ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಹುಟ್ಟಿ ಬೆಳೆದ ಸುನಕ್, ಭಾರತದೊಂದಿಗೆ ಪೂರ್ವಜರ ಸಂಬಂಧವನ್ನು ಹೊಂದಿದ್ದಾರೆ.
ಕಳೆದ ವರ್ಷ, ಅವರು ಅಕ್ಷತಾ ಅವರೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಮತ್ತು G20 ಶೃಂಗಸಭೆಯ ಭೇಟಿಯ ಸಮಯದಲ್ಲಿ ದೇವಾಲಯದ ಸ್ವಾಮಿಗಳೊಂದಿಗೆ ಸಂವಾದ ನಡೆಸಿದ್ದರು.
Former UK PM Rishi Sunak at Bengaluru’s Sri Raghavendra Swami Mutt with Akshata Murthy, in-laws.
Former UK Prime Minister Rishi Sunak visited the Sri Raghavendra Swami Mutt in Jayanagar, Bengaluru, along with his wife Akshata Murthy and in-laws, Infosys founder Narayana Murthy and MP Sudha Murty.
The family was at the Sri Raghavendra Swami Mutt to seek blessings of Guru Raghavendra during the auspicious month of Kartika, it added.