
ಉಡುಪಿ: ಮೂರು ಮಕ್ಕಳೊಂದಿಗೆ ತಾಯಿ ಮನೆಯಿಂದ ಹೋಗಿ ವಾಪಾಸು ಬಾರದೇ ನಾಪತ್ತೆಯಾಗಿದ್ದ ಪತ್ತೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಲಕ್ಷ್ಮವ್ವ ಕುಮಾರ ಮಾಳವತ್ತರ (30) ಎಂಬ ಮಹಿಳೆಯು ತನ್ನ ಮೂವರು ಮಕ್ಕಳಾದ ಅಪೂರ್ವ (7), ಶ್ರೇಯಾ (5) ಹಾಗೂ ಮನೋಜ್ (2) ನೊಂದಿಗೆ ಡಿ.4 ರಂದು ಮನೆಯಿಂದ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
ಲಕ್ಷö್ಮವ್ವ ಅವರು 5 ಅಡಿ 1 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ಲಮಾಣಿ ಭಾಷೆ ಮಾತನಾಡುತ್ತಾರೆ. ಅಪೂರ್ವ 3 ಅಡಿ 1 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ, ಶ್ರೇಯಾ 3 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಲಮಾಣಿ ಭಾಷೆ ಮತ್ತು ಮನೋಜ್ 2 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.