Mangalore and Udupi news
ಪ್ರಸ್ತುತಮನೋರಂಜನೆರಾಜಕೀಯ

ತೇಜಸ್ವಿ ಸೂರ್ಯಗೆ ಕೂಡಿ ಬಂದ ಕಂಕಣಭಾಗ್ಯ.? – ಜನಪ್ರಿಯ ಗಾಯಕಿ ಸಿವಶ್ರೀ ಜೊತೆ ವಿವಾಹ

ಬಿಜೆಪಿಯ ಯುವ ಸಂಸದರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹೀಗೊಂದು ಸುದ್ದಿ ರಾಜಕೀಯ ವಲಯದಲ್ಲಿ ಸುದ್ದಿಯಾಗುತ್ತಿದೆ. ಎರಡೆರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಯೂಥ್ ಲೀಡರ್ ತೇಜಸ್ವಿ ಸೂರ್ಯ ಅವರು 2025ರಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿದ್ದಾಗಿ ಸುದ್ದಿ ಮಾಧ್ಯಮಗಳು ತಿಳಿಸಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಅವರ ಸ್ಟೈಲಿಶ್ ಲುಕ್‌ಗೆ ಫಿದಾ ಆಗದವರಿಲ್ಲ. ಇನ್ನೂ ಅವಿವಾಹಿತರಾಗಿರುವ ಇವರ ಮದುವೆ ಯಾವಾಗ ಎಂಬ ಪ್ರಶ್ನೆ ಹಲವು ಬಾರಿ ಎದ್ದಿದೆ. ಆದರೆ ಅವರು ಯಾವುದೇ ಉತ್ತರ ನೀಡದೆ ಮೌನವಾಗಿದ್ದರು. ಆದರೆ ಈಗ ಇದಕ್ಕೆ ಉತ್ತರ ಸಿಕ್ಕಿದೆ.

Advertisement

 

ತೇಜಸ್ವಿ ಅವರಿಗೆ ಹಲವಾರು ಸಂದರ್ಭಗಳಲ್ಲಿ ಮದುವೆಯ ಬಗ್ಗೆ ಕೇಳಿದಾಗಲೂ ಅವರು ಈ ವಿಷಯದ ಬಗ್ಗೆ ಬಾಯಿ ಬಿಡಲಿಲ್ಲ, ಆದರೆ ಅವರು ಈಗ ಸದ್ದಿಲ್ಲದೆ ಮದುವೆಗೆ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.. ಸಂಸದ ತೇಜಸ್ವಿ ಸೂರ್ಯ ಚೆನ್ನೈ ಮೂಲದ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ ಸಿವಶ್ರೀ ಸ್ಕಂದ ಪ್ರಸಾದ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಎಂ.ಪಿ. ತೇಜಸ್ವಿ ಸೂರ್ಯ ಮದುವೆ ಖಚಿತವಾಗಿದ್ದು, ಅವರು ಚೆನ್ನೈ ಮೂಲದ ಗಾಯಕಿ ಸಿವಶ್ರೀ ಅವರನ್ನು ವರಿಸಲಿದ್ದಾರೆ ಎಂಬ ವರದಿಗಳಿವೆ. ಮಾರ್ಚ್ 4, 2025 ರಂದು ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸೂರ್ಯ ಆಗಲೀ, ಸಿವಶ್ರೀಯಾಗಲೀ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಸಿವಶ್ರೀ ಸ್ಕಂದ ಪ್ರಸಾದ್ ಅವರು ಕರ್ನಾಟಕ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದರು. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ. ಇವರು ಆಯೋಧ್ಯಾ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ಹಾಡಿದ್ದ ಹಾಡು ವೈರಲ್ ಆಗಿತ್ತು. ಪೂಜಿಸಲೆಂದೇ ಹೂಗಳ ತಂದೆ ಹಾಡನ್ನು ಕೋಟ್ಯಾಂತರ ಜನ ಮೆಚ್ಚಿದ್ದರು. ಈ ಹಾಡಿಗೆ ಪ್ರಧಾನಿ ಮೋದಿ ಸಹ ಮೆಚ್ಚಿಗೆ ಸೂಚಿಸಿದ್ದರು.

ತೇಜಸ್ವಿ ಸೂರ್ಯ ಹಾಗೂ ಸಿವಶ್ರೀ ಮದುವೆ ಇನ್ನೂ ಕೂಡ ಅಧೀಕೃತವಾಗಿಲ್ಲ. ಈ ಸುದ್ದಿಯ ನಿಜಾಂಶ ಇನ್ನಷ್ಟೆ ತಿಳಿಯಬೇಕಾಗಿದೆ.

Related posts

Leave a Comment