Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುತ್ತೂರು: ಹಾಡಹಗಲೇ ಮನೆಗಳ್ಳತನ ಸ್ಪೆಷಲಿಸ್ಟ್ ಸೂರಜ್ ಅರೆಸ್ಟ್.!!

ಪುತ್ತೂರು : ಯಾವುದೇ ಸುಳಿವು ಬಿಡದೆ ಹಗಲು ವೇಳೆ ಮನೆಗಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಬoಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಸೂರಜ್(36) ಎಂದು ಗುರುತಿಸಲಾಗಿದೆ.

ಈ ಖತರ್ನಾಕ್ ಕಳ್ಳನಿಂದ ಒಟ್ಟು ಅಂದಾಜು ಮೌಲ್ಯ 18,00.000/-ರೂ (ಹದಿನೆಂಟು ಲಕ್ಷ ರೂ) ಮೌಲ್ಯದ 200ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ ಆಲ್ಟೋ ಕಾರು ವಶಪಡಿಸಿಕೊಳ್ಳಲಾಗಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ರಕೋಡಿ ಎಂಬಲ್ಲಿ ಡಿಸೆಂಬರ್ 20 ರಂದು ಹಗಲು ವೇಳೆ ಮನೆಯವರುವ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೇ ರೀತಿ ಕಳ್ಳತನ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆ ಆಗುತಿತ್ತು. ಈ ಹಿನ್ನಲೆ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿಯನ್ನು ಅಪರಾಧ ಪತ್ತೆ ತಂಡ ಕಾರು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಬoಧಿತ ಆರೋಪಿಯ ವಿಚಾರಣೆ ನಡೆಸಿದ ವೇಳೆ ಆರೋಪಿ ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ ಹಾಗೂ ಈ ಹಿಂದೆ ಕಡಬ ಠಾಣಾ ಸರಹದ್ದಿನ ಅಲಂಗಾರು ಗ್ರಾಮದ ಕಲೆರಿ, ಬಂಟ್ವಾಳ ಗ್ರಾಮಾಂತರ ಸರಹದ್ದಿನ ಇರಾ ಹಾಗೂ ವಿಟ್ಲ ಪೊಲೀಸ್ ಠಾಣಾ ಸರಹದ್ದಿನ ಕೊಲಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ತಿದು ಗ್ರಾಮದ ಅಳಕೆ ಮಜಲು ಕಡೆಗಳಲಿ.. ಹಗಲು ಸಮಯ ಕಳವು ಮಾಡಿದ ಪ್ರಕರಣಗಳಲಿ ಭಾಗಿಯಾಗಿದ್ದ. ಬಂಧಿತನ ಮೇಲೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿದೆ.

Advertisement

Related posts

Leave a Comment