ಮಂಗಳೂರು : ಕೆಲಸಕ್ಕೆಂದು ಹೇಳಿ ಹೊರಟ ವ್ಯಕ್ತಿ ಕಾಣೆಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಮಹಮ್ಮದ್ ಆಸೀಫ್ (38) ಎನ್ನಲಾಗಿದೆ.
ದಿನಾಂಕ 26.02.2025 ರಂದು ಮಹಮ್ಮದ್ ಆಸೀಫ್ ಕೆ.ಐ ಕನೆಕ್ಷನ್ ಕಂಪನಿ ವತಿಯಿಂದ ಶಿವಮೊಗ್ಗದ ಸಿದ್ಲಿಪುರ ಎಂಬಲ್ಲಿ ಕೆಲಸ ಮಾಡಿಕೊಡಿದ್ದರು. ಕಳೆದ ಎರಡು ವಾರಗಳ ಹಿಂದೆ ಆಸೀಫ್ ಊರಿಗೆ ಬಂದವರು ಅದೇ ಕಂಪನಿಯ ಕೆಲಸವು ಕುತ್ತಾರು ಪ್ರದೇಶದಲ್ಲಿ ಇದ್ದು ಪ್ರತಿ ದಿನ ಮನೆಯಿಂದಲೇ ಹೋಗಿ ಬಂದು ಮಾಡಿಕೊಂಡಿದ್ದರು ದಿನಾಂಕ 24-02-2025 ರಂದು ಬೆಳಿಗ್ಗೆ 8.30 ಗಂಟೆಗೆ ಕುತ್ತಾರಿನ ಕೆಲಸಕ್ಕೆ ಹೋಗಿ ಬರುವುದಾಗಿ ಆಸೀಫ್ ಹೆಂಡತಿ ಬಳಿ ಹೇಳಿ ಹೋದವರು ಕೆಲಸಕ್ಕೂ ಹೋಗದೆ ಮನೆಗೂ ಬಾರದೇ ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಮ್ಮದ್ ಆಸೀಫ್ ಎಂಬವರು ಪತ್ತೆಯಾದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ತಿಳಿಸಿದ್ದಾರೆ.
ಮಹಮ್ಮದ್ ಆಸೀಫ್, ಎತ್ತರ: 5.4 ಅಡಿ, ಮೈಬಣ್ಣ: ಎಣ್ಣೆ ಕಪ್ಪು ಮೈಬಣ್ಣ, ಸಾಧರಣ ಶರೀರ, ದುಂಡು ಮುಖ.
ಧರಿಸಿದ್ದ ಬಟ್ಟೆ: ನಸು ಪಚ್ಚೆ ಬಣ್ಣದ ತುಂಬು ತೋಳಿನ ಅಂಗಿ ಕ್ರೀಮ್ ಕಲರ್ ಪ್ಯಾಂಟ್
ತಿಳಿದಿರುವ ಭಾಷೆ: ಕನ್ನಡ, ಬ್ಯಾರಿ ,ತುಳು, ಮಲಯಾಳಂ.
