
ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ನೇತೃತ್ವದಲ್ಲಿ MRPL -ONGC ಕರ್ಮಚಾರಿ ಸಂಘ (ರಿ) ಇದರ MRPL ನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಕೆಲವೊಂದು ನೈಜ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಮಿಕರಿಗೆ 21,000 ಕ್ಕಿಂತ ಮೇಲ್ಪಟ್ಟ ವೇತನ ಇದ್ದಲ್ಲಿ ಅಂತಹ ಕಾರ್ಮಿಕರಿಗೆ esic ಆರೋಗ್ಯ ಭದ್ರತೆ ಅನ್ವಹಿಸುವುದಿಲ್ಲ. ಅಂತಹ ಕಾರ್ಮಿಕರಿಗೆ ಮೆಡಿಕ್ಲೈಮ್ ಫೆಸಿಲಿಟಿ ಯನ್ನು ನಿಯಮಾನುಸಾರ ಮಾಡುವಂತೆ ಚರ್ಚೆ ನಡೆಯಿತು.
MRPL ಸ್ಪೆಷಲ್ allowance 8ವರ್ಷ ಕಳೆದರೂ ಈ ವಿಶೇಷ ಭತ್ಯೆಯನ್ನು ದ್ವಿಗುಣ ಮಾಡಿಲ್ಲ,ಈ ಬಗ್ಗೆ ಚರ್ಚೆ ನಡೆಸಿ MRPL ಸಂಸ್ಥೆಗೆ ವಿಶೇಷ ಭತ್ಯೆಯನ್ನು ಗುತ್ತಿಗೆ ಕಾರ್ಮಿಕರಿಗೆ ದ್ವಿಗುಣಗೊಳಿಸುವಂತೆ ಸೂಚಿಸಲಾಯಿತು.
MRPL ನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕೆಲಸದ ಸಮಯ ಅಥವಾ ಕಂಪನಿಯ ಹೊರಗೆ ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿಮೆಯ ಮೊತ್ತವನ್ನು 25 ಲಕ್ಷಕ್ಕೆ ಏರಿಕೆ ಮಾಡುವಂತೆ ಎಂ ಆರ್ ಪಿ ಎಲ್ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಮುದ್ರ ಮಟ್ಟಕ್ಕಿಂತ 30 ಫೀಟ್ ಎತ್ತರದಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಹೈಟ್ allowance ನೀಡುವಂತೆ ಸೂಚಿಸಲಾಯಿತು. ಕಾರ್ಮಿಕರ ಇತರ ಭದ್ರತೆಗೆ ಸಂಬಂಧಪಟ್ಟಂತೆ ವಿಶ್ರಾಂತಿ ಕೊಠಡಿ ಶೌಚಾಲಯಗಳನ್ನು ನೀಡುವಂತೆ ಚರ್ಚಿಸಲಾಯಿತು. ಈ ಮೇಲಿನ ಎಲ್ಲ ವಿಷಯಗಳನ್ನು ಕೂಲಂಕುಶವಾಗಿ ಪರಿಗಣಿಸಿ MRPL ಗೆ ಮೂರು ದಿನದಲ್ಲಿ ಲಿಖಿತ ರೂಪದ ಉತ್ತರವನ್ನು ನೀಡುವಂತೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಆದೇಶಿಸಿದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ದಕ್ಷಿಣ ಕನ್ನಡ ಜಿಲ್ಲೆ, ಹಾಗೂ ಸಹಾಯಕ ಜಿಲ್ಲಾಧಿಕಾರಿಯವರು ಹಾಗೂ ಸಹಾಯಕ ಕಾರ್ಮಿಕ ಆಯುಕ್ತರು (ಕೇಂದ್ರ) ಶ್ರೀ ಪ್ರಕಾಶ್ ಆರ್, ಲೇಬರ್ ಏನ್ಫೋರ್ಸ್ಮೆಂಟ್ ಆಫೀಸರ್ ನಿತಾ ರೆಬೆಲೋ, ಸಹಾಯಕ ಕಾರ್ಮಿಕ ಆಯುಕ್ತರು (ರಾಜ್ಯ) ನಜೀಯ ಬಾನು, ಪ್ರಶಾಂತ್ ಮೂಡೈಕೊಡಿ ಹಾಗೂ ಎಮ್ ಆರ್ ಪಿ ಎಲ್ ಕರ್ಮಚಾರಿ ಸಂಘದ ಅಧ್ಯಕ್ಷ ನಿತಿನ್ ಬಿ ಸಿ ರೋಡ್,ಪ್ರಸಾದ್ ಅಂಚನ್, ಸುರೇಂದ್ರ ಭಟ್, ಪುರುಷೋತ್ತಮ್, ಸುನಿಲ್ ಬೋಳ ಹಾಗೂ MRPL ಅಧಿಕಾರಿಗಳಾದ ಕೃಷ್ಣ ಹೆಗ್ಡೆ, ಮನೋಜ್ ಕುಮಾರ್, ರೋಶನ್ ಉಪಸ್ಥಿತರಿದ್ದರು.