ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಫೆ. 11ರ ಮಂಗಳವಾರ ರಾತ್ರಿ ಸುರತ್ಕಲ್‌ಮ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ನೋಡಿದ್ದಾರೆ.
ಇತ್ತೀಚೆಗೆ ವಿಶಾಲ್ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದು, ಇದಕ್ಕೆ ವಿಶಾಲ್ ಒಪ್ಪಿದ್ದಾರೆ.
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ವಿಶಾಲ್, ಕಾಂತಾರ ಸಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿದಿದ್ದೇನೆ. ಇದೀಗ ಪ್ರಥಮ ಬಾರಿಗೆ ನೇಮೋತ್ಸವವನ್ನು ನೋಡುತ್ತಿದ್ದೇನೆ. ತುಂಬಾ ಖುಷಿ ನೀಡಿದೆ, ನಿನ್ನೆ ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದು ಇದೀಗ ಇಲ್ಲಿಗೆ ಭೇಟಿ ನೀಡಿದ್ದೇನೆ. ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳಿನಲ್ಲಿ ಹಲವು ಸಿನಿಮಾಗಳ ಮಾತುಕಥೆ ನಡೆಯುತ್ತಿದೆ ಎಂದಿದ್ದಾರೆ.
ಹರಿಪಾದೆ ಜಾರಂದಾಯ ಅತ್ಯಂತ ಕಾರಣಿಕದ ದೈವವಾಗಿದ್ದು ನಂಬಿದವರಿಗೆ ಇಂಬು ನೀಡುವ ದೈವವಾಗಿದೆ ಇಲ್ಲಿನ ನೆಮೋತ್ಸವ ಸಂದರ್ಭ ಜಾರಂದಾಯನ ಪಲ್ಲಕ್ಕಿಗೆ ಅವೇಶ ಬರುತ್ತದೆ. ಸುಮಾರು 15 ಜನ ಸೇವಕರು ನಿಯಂತ್ರಣಕ್ಕೆ ಪ್ರಯತ್ನಿಸಿದರು ನಿಯಂತ್ರಣಕ್ಕೆ ಸಿಗುವುದಿಲ್ಲ.
ಇಂತಹ ಕಾರಣಿಕ ಹೊಂದಿರು ಶ್ರೀ ಕ್ಷೇತ್ರದ ಬಗ್ಗೆ ತಿಳಿದೇ ವಿಶಾಲ್ ಭೇಟಿ ನೀಡಿರುವ ಸಾಧ್ಯತೆ ಇದೆ. ಅಲ್ಲದೆ ಈ ದೈವಸ್ಥಾನದಲ್ಲಿ ತುಲಾಬಾರ ಸೇವೆ ಪ್ರಮುಖ್ಯತೆ ಪಡೆದಿದ್ದು ಭಕ್ತರು ಸಮಸ್ಯೆ ನಿವಾರಣೆಗೆ ತುಲಾಬಾರ ಸೇವೆ ನೀಡುತ್ತಿದ್ದು ನಟ ವಿಶಾಲ್ ಕೂಡ ಆರೋಗ್ಯ ಸುಧಾರಿಸಿದ ನಂತರ ತುಲಾಭಾರ ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ.