Mangalore and Udupi news
ಪ್ರಸ್ತುತರಾಜ್ಯ

ತಲಕಾವೇರಿಯಲ್ಲಿ ಜೀವನದಿ ಕಾವೇರಿ ತೀರ್ಥೋದ್ಭವ: ಬ್ರಹ್ಮಕುಂಡಿಕೆಯಲ್ಲಿ ಭಕ್ತರಿಗೆ ತೀರ್ಥರೂಪಿಣಿಯಾಗಿ ದರ್ಶನ

ಸಹಸ್ರಾರು ಭಕ್ತರ ಕಾತರದ ಕಾಯುವಿಕೆ ಕೊನೆಗೂ ಆ ಸಂಭ್ರಮದ ಕ್ಷಣದೊಂದಿಗೆ ಮುಕ್ತಾಯವಾಯಿತು. ಕೊಡಗು ಜಿಲ್ಲೆಯ ಮಡಿಕೇರಿಯ ಭಾಗಮಂಡಲದಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಜೀವ ನದಿ ಕಾವೇರಿ ಗುರುವಾರ ಬೆಳಗ್ಗೆ 7. 41 ‌ನಿಮಿಷಕ್ಕೆ ಸರಿಯಾಗಿ ತೀರ್ಥ ರೂಪಿಣಿಯಾಗಿ ಉಕ್ಕಿ ಹರಿದಳು.

ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವಾಗಿದೆ.ತೀರ್ಥೋದ್ಭವದ ವೇಳೆ ಭಕ್ತರ ಜಯಘೋಷ, ಅರ್ಚಕರ ವೇದ ಮಂತ್ರಘೋಷಗಳು ಮುಗಿಲುಮುಟ್ಟಿದವು. ತೀರ್ಥ ಉಕ್ಕುತ್ತಿದ್ದಂತೆಯೇ ಮೊದಲ ತೀರ್ಥಥವನ್ನು ಬ್ರಹ್ಮ ದೇವನಿಗೆ ಅರ್ಪಣೆ ಮಾಡಲಾಯಿತು. ಬಳಿಕ ಅರ್ಚಕ ವೃಂದಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ನಂತರ ಭಕ್ತವೃಂದ ತೀರ್ಥ‌ಸ್ನಾನಕ್ಕೆ ಕಲ್ಯಾಣಿಗೆ ಮುಗಿಬಿದ್ದಿತು. ಬಿಂದಿಗೆ, ಕೊಡಗಳಲ್ಲಿ ತೀರ್ಥ ಸಂಗ್ರಹ ಮಾಡುತ್ತಿರುವುದು ಕಂಡುಬಂತು.

ತೀರ್ಥೋದ್ಭವ ಬ್ರಹ್ಮಕುಂಡಿಕೆಯಲ್ಲಿ ಬಳಿ ಪ್ರಶಾಂತ್‌ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ತೀರ್ಥೋದ್ಭವ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಹಿಡಿದು ಆಗಮಿಸಿದ್ದು, ಕಾವೇರಿ ಮಾತೆಗೆ ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಕಾವೇರಿ ತವರಿನಲ್ಲಿ ಕುಲದೇವತೆ ಕಾವೇರಿ ಜಾತ್ರೆ ಕಳೆಕಟ್ಟಿದೆ. ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ತೀರ್ಥೋಧ್ಬವದ ಹಿನ್ನೆಲೆ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಹರಿದು ಬರುತ್ತಿದ್ದಾರೆ.

ಇದಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಸಿದ್ಧತೆಗಳು ಪೂರ್ಣಗೊಂಡಿವೆ. ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಲಿದ್ದು, ಭಾಗಮಂಡಲದಿಂದ ತಲಕಾವೇರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯಲ್ಲೂ ಸಾವಿರಾರು ಭಕ್ತರು ಬರುವುದರಿಂದ, ಭಾಗಮಂಡಲದಿಂದ ತಲಕಾವೇರಿಯವರೆಗೆ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ತೀರ್ಥವನ್ನು ಪ್ಲಾಸ್ಟಿಕ್ ಕೊಡ, ಕ್ಯಾನ್‌, ಬಾಟಲಿಗಳಲ್ಲಿ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.

Theerthodbhava is the phenomenon involving the appearance of holy water that happens at Brahma Kundike (pot) or fountain head of the pond located in Talakaveri. This water is considered holy, collected and preserved by locals while thousands of visitors take holy dip in Kaveri river to get blessed.

Related posts

Leave a Comment