Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಸುರತ್ಕಲ್: ರಸ್ತೆ ಕಾಮಗಾರಿ – ಬದಲಿ ಮಾರ್ಗ ಬಳಕೆಗೆ ಸೂಚನೆ.!!

ಸುರತ್ಕಲ್ ಎಂಆರ್ ಪಿಯಲ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಂಕ್ರಟೀಕರಣ ಕಾಮಗಾರಿಗಾಗಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗ ಉಪಯೋಗಿಸುವ ಕುರಿತಂತೆ ಮಂಗಳೂರು ಕಮೀಷನರ್ ಅದೇಶ ಹೊರಡಿಸಿದ್ದಾರೆ.

ಸುರತ್ಕಲ್ ಆಸುಪಾಸಿನ ಜನರಿಗೆ ಸೂರಜ್ ಹೋಟೆಲ್ ಬಳಿಯ ಚೊಕ್ಕಬೆಟ್ಟು ರಸ್ತೆ ಹಾಗೂ ಮಂಗಳೂರು ಕಡೆಯಿಂದ ಬರುವವರಿಗೆ ಕುಳಾಯಿ ಕಾನಾ ರಸ್ತೆಯಾಗಿ ಚೊಕ್ಕಬೆಟ್ಟು ಹೋಗಲು ಬದಲಿ ಮಾರ್ಗ ಸೂಚಿಸಲಾಗಿದೆ.

ಪರ್ಯಾಯ ರಸ್ತೆ ಬಳಕೆ ಹಾಗೂ ಸಂಚಾರ ನಿಷೇಧ ಕುರಿತಂತೆ ಮಂಗಳೂರು ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಜನತೆ ಸಹಕರಿಸಬೇಕು: ಡಾ.ಭರತ್ ಶೆಟ್ಟಿ ವೈ

ಕಾಂಕ್ರಟೀಕರಣ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆಯ ನಿಧಿಯಿಂದ 78 ಲಕ್ಷ ರೂ.ಮಂಜೂರು ಮಾಡಲಾಗಿದೆ. ಕಾಮಗಾರಿ ಸಂದರ್ಭ ಒಂದೆರಡು ತಿಂಗಳು ಬದಲಿ ಮಾರ್ಗ ಉಪಯೋಗಿಸುವ ಅನಿವಾರ್ಯತೆ ಯಿದ್ದು ವಾಹನ ಸವಾರರು ಜನರು ಸಹಕರಿಸಬೇಕು. ಶಾಶ್ವತ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಕಾಂಕ್ರಿಟ್ ಮಾರ್ಗ ಅಗತ್ಯವಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Related posts

Leave a Comment