Mangalore and Udupi news
ದಕ್ಷಿಣ ಕನ್ನಡಪ್ರಸ್ತುತರಾಜ್ಯ

ಈರುಳ್ಳಿ ಬೆಲೆ ದಿಢೀರ್ ಕುಸಿತ: ರೈತರಿಗೆ ಲಕ್ಷಾಂತರ ನಷ್ಟ

ಏಕಾಏಕಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದ್ದು, ಈರುಳ್ಳಿ ಬೆಲೆ ದಿಢೀರ್ ಕುಸಿತಗೊಂಡಿದೆ. ಹೀಗಾಗಿ ಸಾಲ ಮಾಡಿ ಈರುಳ್ಳಿ ಬೆಳೆದಂತಹ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಈ ವರ್ಷದ ಆರಂಭದಲ್ಲಿ ಮಳೆಯ ಸಮಸ್ಯೆ ತಲೆದೋರಿರಲಿಲ್ಲ. ಈರುಳ್ಳಿ ಫಸಲು ಕೂಡ ಉತ್ತಮವಾಗಿಯೇ ಬಂದಿತ್ತು. ಆದರೆ ಏಕಾಏಕಿ ಬಿಟ್ಟೂ ಬಿಡದಂತೆ ಸುರಿದ ಮಳೆಯ ಪರಿಣಾಮವಾಗಿ ಚಿತ್ರದುರ್ಗ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಹಾಳಾಗಿದೆ.

ಈರುಳ್ಳಿ ಬೆಳೆ ಬೆಳೆಯಲು ಎಕರೆಗೆ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಖರ್ಚಾಗುತ್ತದೆ. ಈರುಳ್ಳಿ ಬೆಳೆ ನಾಶವಾಗಿದ್ದರಿಂದ ಸಾಲ ಮಾಡಿ ಈರುಳ್ಳಿ ಬೆಳೆದ ರೈತರಿಗೆ ಈಗ ಲಕ್ಷ ಲಕ್ಷ ನಷ್ಟ ಅನುಭವಿಸುವಂತಾಗಿದೆ.

Related posts

Leave a Comment