Mangalore and Udupi news
ದಕ್ಷಿಣ ಕನ್ನಡದೇಶ- ವಿದೇಶಪ್ರಸ್ತುತಮಂಗಳೂರು

ಶ್ರೀ ನವದುರ್ಗಾ ಸತ್ಯದೇವತೆ ದೇವಸ್ಥಾನ ಪದ್ಮನಗರ, ಭಿವಂಡಿ: ವಿಜೃಂಭಣೆಯ ಶ್ರೀ ಸತ್ಯ ದೇವತೆ, ಸನ್ಯಾಸಿ ಮಂತ್ರ ದೇವತೆ ಹಾಗೂ ಗುಳಿಗ-ಪಂಜುರ್ಲಿ ದೈವದ ನೇಮೋತ್ಸವ

ಮುಂಬೈ : ಶ್ರೀ ನವದುರ್ಗಾ ಸತ್ಯದೇವತೆ ದೇವಸ್ಥಾನ (ರಿ.) ಭಿವಂಡಿ ಪದ್ಮ ನಗರ, ದುರ್ಗಾ ಮಂದಿರ ರೋಡ್ ಇಲ್ಲಿ ಜ. 28ರ ಮಂಗಳವಾರ ಶ್ರೀ ನವದುರ್ಗಾ, ಸತ್ಯದೇವತೆ ಹಾಗೂ ಪರಿವಾರ ಶಕ್ತಿಗಳ 15ನೇ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ನೇಮೋತ್ಸವವು ದೇವಸ್ಥಾನದ ಮೋಕ್ತೆಸರರಾದ ಗೋಪಾಲ ಪೂಜಾರಿ ಮುಂದಾಳತ್ವದಲ್ಲಿ ಜರಗಿತು.

ಪ್ರಾತಃಕಾಲ ಬೆಳಿಗ್ಗೆ ಗಣಹೋಮ, ತದನಂತರ ನವಕ ಪ್ರಧಾನ ಕಲಶ, ಪಂಚಾಮೃತ ಅಭಿಷೇಕ, ಭಜನೆ, ಮಹಾ ಚಂಡಿಕಾ ಹೋಮ ಪೂರ್ಣಾಹುತಿ, ಶ್ರೀ ನವದುರ್ಗಾ, ಸತ್ಯದೇವತೆ ಹಾಗೂ ಪರಿವಾರ ಶಕ್ತಿಗಳ ಮಹಾಪೂಜೆ, ಮಧ್ಯಾಹ್ನ ಗೋಪಾಲ ಪೂಜಾರಿ ಅವರಿಂದ ಶ್ರೀ ಸತ್ಯದೇವತೆ ದೈವದ ದರ್ಶನ ತದನಂತರ ಮಹಾ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸತ್ಯದೇವತೆ ಹಾಗೂ ಪರಿವಾರ ದೈವಗಳ ಭಂಡಾರ ಇಳಿದು ಸತ್ಯದೇವತೆ ಗಗ್ಗರ ಸೇವೆ ತದನಂತರ ಅನ್ನಸಂತರ್ಪಣೆ.
ರಾತ್ರಿ ಸನ್ಯಾಸಿ ಮಂತ್ರ ದೇವತೆ ನೇಮೋತ್ಸವ ಹಾಗು ಗುಳಿಗ-ಪಂಜುರ್ಲಿ ದೈವದ ನೇಮೋತ್ಸವ ಜರಗಿತು. ಶಿಬರೂರು ರಾಜ, ಜಯ ಇರುವೈಲು, ಕಡಂದಲೆ ಕಾಳು, ವಿಶ್ವನಾಥ ಕಿನ್ನಿಗೋಳಿ ದೈವ ನರ್ತನ ಸೇವೆಗೈದರು. ಮಧ್ಯಸ್ಥರಾಗಿ ಮಹೇಶ್ ಪೂಜಾರಿ ಲಚ್ಚಿಲ್, ವಾದ್ಯ ವಾಲಗದಲ್ಲಿ ಚಂದ್ರಶೇಖರ್ ಕುಲಾಲ್, ದಿನೇಶ್ ಕೋಟ್ಯಾನ್, ಗಣೇಶ್ ಕಟೀಲು ಮಾರೂರು ಭಾಸ್ಕರ್ ಹಳೆಯಂಗಡಿ ಸೇವೆಗೈದರು. ನೇಮೋತ್ಸವದಲ್ಲಿ ಪಾಲ್ಗೊಂಡ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಭಿವಂಡಿ ಮಾಜಿನಗರ ಸೇವಕ ಸಂತೋಷ್ ಎಂ. ಶೆಟ್ಟಿ, ಹರೀಶ್ ಪ್ರಭು ಅಂಬರ್ ವಡಾಪಾವ್ ಕಲ್ಯಾಣ್ ಅವರನ್ನು ಗೌರವಿಸಲಾಯಿತು.

ಸಾವಿರಾರು ಮಂದಿ ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಹಾಗೂ ಅನ್ನ ಪ್ರಸಾದವನ್ನು ಸ್ವೀಕರಿಸಿದರು. ವಿಜೃಂಭಣೆಯಿಂದ ಜರಗಿದ ನೇಮೋತ್ಸವದ ಯಶಸ್ವಿಗೆ ಶ್ರೀ ನವದುರ್ಗಾ ಸತ್ಯ ದೇವತೆ ದೇವಸ್ಥಾನದ ಸರ್ವ ಪದಾಧಿಕಾರಿಗಳು, ಸದಸ್ಯರು, ಭಕ್ತರು ಸಹಕರಿಸಿದರು.

SHREE NAVADURGA SATHYADEVATHE DEVASTHANA (R.) Bhiwandi Padma Nagar,
Jathra Mahotsava & Nemotsava

Mumbai: Bhiwandi Padma Nagar, Durga Mandir Road Sri Navadurga Satyadevate Temple (R.) On Tuesday 28th, the 15th Annual Jatra Mahotsava and Nemotsava of Shri Navadurga, Sathyadevata and Parivar daivas was held under mokthesararu Gopal Pujari of Deiva Patri Sachharipet.

In the morning there was Ganahoma, followed by Navaka Pradhan Kalash, Panchamrita Abhishek, Bhajan, Maha Chandika Homa Purnahuti, Maha Pooja of Sri Navadurga, Sathyadevata and Parivar Shaktis, in the afternoon the darshan of Sri Satyadevata Deity by Gopal Pujari and then Maha food offering. In the evening, Sathyadevata and the family of deities come down and worship Satyadevata Gaggar and then offer food.

At night, the Nemotsava of Sanyasi Mantra deity and the Nemotsava of Guliga-Panjurli Deity took place. Shibaruru Raja, Jaya Iruvailu, Kadandale Kalu, Vishwanath Kinnigoli performed divine dance. Mahesh Pujari Lachhil as moderator, Chandrasekhar Kulal, Dinesh Kotyan, Ganesh Kateelu Maruru Bhaskar Old Shop served as moderator.
Harish G., president of Billavara Association, Mumbai, who participated in the recruitment ceremony. Amin, Bhiwandi Former Nagar Sevak Santhosh M. Shetty, Harish Prabhu Amber Vadapav Kalyan were felicitated.

Thousands of devotees participated in the Nemotsavam and received Gandha Prasad and Anna Prasad.   Sri Navadurga Satya Deva Temple and all office-bearers, members and devotees contributed to the success of the Nemotsavam which was held with grandeur.

Advertisement

Related posts

Leave a Comment