Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಖ್ಯಾತ ಸೀರಿಯಲ್ ನಟಿ ಶೋಭಿತಾ ಆತ್ಮಹತ್ಯೆ ಪ್ರಕರಣ: ಡೆತ್‌ ನೋಟ್‌ ಪತ್ತೆ, ಸ್ಫೋಟಕ ಮಾಹಿತಿ ಬಹಿರಂಗ.!!

ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಇನ್ನಿಲ್ಲ.. ಕಿರುತೆರೆ ನಟಿ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಆದರೆ ಇದೂ ಆತ್ಮಹತ್ಯೆಯೂ ಅಥವಾ ಬೇರೆಯೇ ಏನೋ ನಡೆದಿದೆಯೋ ಎನ್ನುವಂತೆ ಸಂಶಯ ವ್ಯಾಕ್ತವಾಗಿತ್ತು. ಸದ್ಯ ಮರಣೋತ್ತರ ಪರೀಕ್ಷೆ ಅಂತ್ಯಗೊoಡ ಬಳಿಕ ವೈದ್ಯರು ನಟಿಯ ಸಾವಿಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

Shobitha Shivanna

ಕನ್ನಡದ ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ಖ್ಯಾತಿ ಗಳಿಸಿದ್ದ ನಟಿ ಶೋಭಿತಾ ಶಿವಣ್ಣ ಅವರು ಡಿಸೆಂಬರ್ 1ರಂದು ನಿಧನರಾದ ವಿಷಯ ವ್ಯಾಪಕ ಸುದ್ದಿಯಾಗಿತ್ತು. ಹೈದರಾಬಾದ್ ನಲ್ಲಿ ಅವರು ಸಾವನ್ನಪ್ಪಿದ್ದಾರೆ. ಡಿಸೆಂಬರ್ 2 ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪೋಸ್ಟ್ ಮಾರ್ಟಮ್ ಅಂತ್ಯಗೊoಡ ಬಳಿಕ ವೈದ್ಯರು ನಟಿಯ ಸಾವಿಗೆ ಕಾರಣ ಏನು ಎಂಬದನ್ನು ತಿಳಿಸಿದ್ದಾರೆ. ಶೋಭಿತಾ ಶಿವಣ್ಣ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಆತ್ಮಹತ್ಯೆಯಿಂದಲೇ ಶೋಭಿತಾ ನಿಧರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ನಟಿಯ ಆತ್ಮಹತ್ಯೆ ಸಂಬoಧಿಸಿದoತೆ ನೆರೆಹೊರೆಯವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಶೋಭಿತಾ ಅವರ ಸಂಸಾರದಲ್ಲಿ ಏನಾದರೂ ಬಿರುಕು ಮೂಡಿತ್ತಾ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುತ್ತಿದೆ.

Who was Shobitha Shivanna? Kannada actress found dead by suicide in Hyderabad

ಡೆತ್‌ ನೋಟ್‌ನಲ್ಲಿ ‘ಇಫ್‌ ಯು ವಾಂಟ್‌ ಟು ಕಮಿಟ್‌ ಸೂಸೈಡ್‌, ಯು ಕ್ಯಾನ್‌ ಡು ಇಟ್‌’ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಇದರರ್ಥ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಎನ್ನುವುದಾಗಿದೆ.

ಆಕೆ ಯಾಕಾಗಿ ಹೀಗೆ ಬರೆದಿದ್ದಾಳೆ ಅನ್ನೋದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನೋ ಕಾರಣಕ್ಕಾಗಿಯೇ ಆಕೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲವೇ? ಖಿನ್ನತೆಯೇ ಆಕೆಯ ಸಾವಿಗೆ ಕಾರಣವೇ? ಸೀರಿಯಲ್‌ಗಳಲ್ಲಿ ನಟಿಸದೇ ಇರೋದು ಆಕೆಯ ಖಿನ್ನತೆಗೆ ಕಾರಣವಾಗಿತ್ತೇ ಅನ್ನೋದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

Actress Shobitha Shivanna No More: Top 5 Interesting Facts About Shobitha

ಶೋಭಿತಾ ಅವರು ಮದುವೆ ಆದ ಬಳಿಕ ಹೈದರಾಬಾದ್ ನಲ್ಲಿ ಪತಿಯ ಜೊತೆ ನೆಲೆಸಿದ್ದರು. ಅಪಾರ್ಟ್ ಮೆಂಟ್ ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಯಾರಾದರೂ ನಟಿಯನ್ನು ಹತ್ಯೆ ಮಾಡಿರಬಹುದೇ ಎಂಬ ಪ್ರಶ್ನೆ ಕೂಡ ಉದ್ಭವ ಆಗಿತ್ತು. ಆದರೆ ಶೋಭಿತಾ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸಿಲ್ಲ. ಹಾಗಾಗಿ ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಶೋಭಿತಾ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿದ್ದಾರೆ. ಶೋಭಿತಾ ಬರೆದಿದ್ದರು ಎನ್ನಲಾದ ಸೂಸೈಡ್? ನೋಟ್ ಕೂಡ ಲಭ್ಯವಾಗಿದೆ. “ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು” ಎಂದು ಇದರಲ್ಲಿ ಬರೆಯಲಾಗಿದೆ. ಅಲ್ಲದೇ, “ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್” ಆಗಿದೆ ಎಂದು ಸಹ ಬರೆಯಲಾಗಿದ್ದು, ಈ ಸಾಲುಗಳ ಅರ್ಥ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

Kannada actress Shobitha Shivanna found dead at home, police suspect suicide: REPORTS | PINKVILLA

ಶೋಭಿತಾ ಅವರು ಮೂಲತಃ ಹಾಸನ ಮೂಲದ ಸಕಲೇಶಪುರದವರು. ಹೈದರಾಬಾದ್?ನಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬದವರು ಬೆಂಗಳೂರಿಗೆ ಮೃತದೇಹ ತರುತ್ತಿದ್ದಾರೆ ಎಂಬ ಮಾಹಿತಿ ಇದೆ. ಎರಡೊಂದ್ಲಾ ಮೂರು, ಒಂದ್ ಕಥೆ ಹೇಳ್ಲಾ, ಎಟಿಎಮ್, ಫಸ್ಟ್ ಡೇ ಫಸ್ಟ್ ಶೋ ಮುಂತಾದ ಸಿನಿಮಾಗಳಲ್ಲಿ ಶೋಭಿತಾ ಅವರು ನಟಿಸಿದ್ದರು. ಬ್ರಹ್ಮಗಂಟು ಸೀರಿಯಲ್ ಮೂಲಕ ಅವರಿಗೆ ಜನಪ್ರಿಯತೆ ಹೆಚ್ಚಿತ್ತು. ದೀಪವು ನಿನ್ನದೇ ಗಾಳಿಯೂ ನಿನ್ನದೇ, ಮಂಗಳಗೌರಿ ಮದುವೆ, ಕೃಷ್ಣ ರುಕ್ಮಿಣಿ, ಮನೆ ದೇವ್ರು, ಗಾಳಿಪಟ, ಅಮ್ಮಾವ್ರು ಮುಂತಾದ ಸೀರಿಯಲ್ ಗಳಲ್ಲಿ ಕೂಡ ಅವರು ಅಭಿನಯಿಸಿದ್ದರು.

Who Is Kannada Actress Shobitha Shivanna | Shobitha Shivanna Age, Movies, Shobitha Shivanna Death News | Shobitha Shivanna Family, Instagram Id - Filmibeat

Related posts

Leave a Comment