Mangalore and Udupi news
ಅಪರಾಧಪ್ರಸ್ತುತರಾಜ್ಯ

ಚೀನಾಗೆ ಚಿಪ್ಪು ಹಂದಿ ಎಕ್ಸ್‌ಪೋರ್ಟ್ ಮಾಡುವ ಕಳ್ಳರ ಗ್ಯಾಂಗ್ ಅರೆಸ್ಟ್.!!

ಚೀನಾಗೆ ಚಿಪ್ಪು ಹಂದಿ ಎಕ್ಸ್ಪೋರ್ಟ್ ಮಾಡುವ ಕಳ್ಳರ ಗ್ಯಾಂಗ್ ಒಂದನ್ನ ಅರಣ್ಯ ಇಲಾಖೆ ಬಂಧಿಸಿದ ಘಟನೆ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿಪ್ಪು ಹಂದಿಯ ಅಂತಾರಾಜ್ಯ ಕಳ್ಳರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಖಾನಾಪುರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ ನಡೆಸಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾನಾಪುರ‌ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ‌ಕಾರ್ಯಾಚರಣೆ ನಡೆದಿದೆ.

ನೆರೆ ರಾಷ್ಟ್ರ ಚೀನಾದಲ್ಲಿ ಔಷಧಿ ಉತ್ಪಾದನೆಗೆಗೆ ಅತಿಹೆಚ್ಚು ‌ಚಿಪ್ಪು ಹಂದಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಖದೀಮರ ಗ್ಯಾಂಗ್‌ ಚೀನಾಗೆ ‌ಚಿಪ್ಪು ಹಂದಿ ಕಳ್ಳ ಸಾಗಣೆ ಮೂಲಕ ರಫ್ತು ಮಾಡುತ್ತಿದ್ದರು.

forest department raid the gang of shell pig thieves exporting to China at Khanapur in Belagavi grg

ಈ ಗ್ಯಾಂಗ್ ಖಾನಾಪುರ ‌ತಾಲೂಕಿನ‌ ಲೋಂಡಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಈ ವೇಳೆ ದಾಳಿ ನಡೆಸಿ ಚಿಪ್ಪು ಹಂದಿ ರಕ್ಷಿಸಿ, ಇಬ್ಬರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಪರಾರಿ ಆಗಿರುವ ಮತ್ತಿಬ್ಬರು ಆರೋಪಿಗಳಿಗೆ ವಿಶೇಷ ‌ತಂಡ‌ ರಚಿಸಿ ಶೋಧಕಾರ್ಯ ಅರಂಭಿಸಿದ್ದಾರೆ.

forest department raid the gang of shell pig thieves exporting to China at Khanapur in Belagavi.

Related posts

Leave a Comment