Mangalore and Udupi news
ದೇಶ- ವಿದೇಶಪ್ರಸ್ತುತ

ಡ್ರೈ ಫ್ರೂಟ್ಸ್ ತಿನ್ನುವ ಬರೋಬ್ಬರಿ 23 ಕೋಟಿ ಮೌಲ್ಯದ ಎಮ್ಮೆ..! ವೀರ್ಯ ಮಾರಾಟ ಮಾಡಿಯೇ ತಿಂಗಳಿಗೆ 4 ಲಕ್ಷ ಸಂಪಾದನೆ

ಅಬ್ಬಬ್ಬಾ.. ಖಡಕ್ ಮೈಕಟ್ಟು, ನೋಡಿದ್ರೆ ಭಯ ಬೀಳ್ತೀರಾ. ದಿನಕ್ಕೆ ಹಾಲು, ಡ್ರೈ ಫ್ರೂಟ್ಸ್, ದಾಳಿಂಬೆ, ಬಾಳೆಹಣ್ಣು ಮಾತ್ರ ಸೇವನೆ. ಇವು ಈತನ ದಿನಚರಿ. ಈತ ಯಾವುದೇ ಫಿಲಮ್ ಸ್ಟಾರಿಗೂ ಕಡಿಮೆಯೇನಿಲ್ಲ. ಈತನ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ. ಅಷ್ಟಕ್ಕೂ ಯಾರೀತಾ? ಮುಂದಕ್ಕೆ ಓದಿ..

ನೀವು ಭಾರತದ ಅತ್ಯಂತ ದುಬಾರಿ ಎಮ್ಮೆ ಬಗ್ಗೆ ಕೇಳಿದ್ದೀರಾ? ಇಲ್ಲ ಎಂದಾದಲ್ಲಿ ಈ ವರದಿ ಓದಿ. ಹರಿಯಾಣದ ಸಿರ್ಸಾ ಎಂಬಲ್ಲಿನ ಅನ್ಮೋಲ್ ಎಂಬ ಹೆಸರಿನ ಎಮ್ಮೆಯ ಮೌಲ್ಯ ನಿಜಕ್ಕೂ ಬೆರಗಾಗುವಂತೆ ಮಾಡುತ್ತದೆ. ಅದರ ಮೌಲ್ಯವು ಎರಡು ರೋಲ್ಸ್-ರಾಯ್ಸ್ ಕಾರು ಅಥವಾ ಹತ್ತು ಮರ್ಸಿಡಿಸ್-ಬೆನ್ಜ್ ವಾಹನಗಳಿಗಿಂತ ಹೆಚ್ಚು ಅಂದರೆ ನಂಬಲೇಬೇಕು.

ದಿ ಡೈಲಿ ಗಾರ್ಡಿಯನ್ ವರದಿ ಪ್ರಕಾರ, ಅನ್ಮೋಲ್ ಎಂಬ ಹೆಸರಿನ ಎಮ್ಮೆಯ ಮೌಲ್ಯ ಬರೋಬ್ಬರಿ 23 ಕೋಟಿ ರೂಪಾಯಿ. ಒಂದರ್ಥದಲ್ಲಿ ಹೇಳುವುದಾದರೆ ಈ ಬೆಲೆಯು ನೋಯ್ಡಾದಲ್ಲಿ 20 ಐಷಾರಾಮಿ ಮನೆಗಳನ್ನು ಖರೀದಿಸಬಹುದು. ಎಮ್ಮೆಯ ಅಸಾಧಾರಣ ಬೆಲೆ ಮತ್ತು ವಿಶಿಷ್ಟ ಗುಣಗಳಿಂದಲೇ ಸುದ್ದಿಯಾಗಿದೆ. ಮೀರತ್‌ನಲ್ಲಿರುವ ಅಖಿಲ ಭಾರತ ರೈತರ ಮೇಳದಲ್ಲಿ ಅನ್ಮೋಲ್ ವಿಶೇಷ ಆಕರ್ಷಣೆಯಾಗಿದ್ದ.

ಅನ್ಮೋಲ್ ಏನೆಲ್ಲಾ ತಿನ್ನುತ್ತಾನೆ?
ಪ್ರತಿದಿನ ಅನ್ಮೋಲ್‌ಗೆ 5 ಕೆಜಿ ಹಾಲು, 4 ಕೆಜಿ ರಸಭರಿತ ದಾಳಿಂಬೆ, 30 ಬಾಳೆಹಣ್ಣುಗಳು, 20 ಪ್ರೋಟೀನ್-ಭರಿತ ಉಂಡೆಗಳು, ಕಾಲು ಕಿಲೋಗ್ರಾಂ ಬಾದಾಮಿಗಳನ್ನು ಒಳಗೊಂಡ0ತೆ ವಿವಿಧ ಆಹಾರಗಳನ್ನು ನೀಡಲಾಗುತ್ತಿದೆ. ಹೆಚ್ಚುವರಿಯಾಗಿ, ಬೆಲೆಬಾಳುವ ಎಮ್ಮೆಯನ್ನು ದಿನಕ್ಕೆರಡು ಬಾರಿ ಸ್ನಾನ, ಸಾಸಿವೆ ಮತ್ತು ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆಯಂತೆ.

ಪ್ರತಿ ತಿಂಗಳು 4-5 ಲಕ್ಷ ರೂಪಾಯಿ ಸಂಪಾದನೆ
ಅನ್ಮೋಲ್ ಎಮ್ಮೆಯಿಂದ ಪ್ರತಿ ತಿಂಗಳಿಗೆ 4 ರಿಂದ 5 ಲಕ್ಷ ಸಂಪಾದನೆ ಮಾಡಲಾಗುತ್ತಿದೆ. ಅದರ ವೀರ್ಯವನ್ನು ಮಾರಾಟ ಮಾಡಿ ಹಣ ಗಳಿಸಲಾಗುತ್ತದೆ. ಅನ್ಮೋಲ್ ಅನ್ನು ಸಾಕಲು, ಆಹಾರದ ಖರ್ಚಿಗೆ ಪ್ರತಿ ತಿಂಗಳು 60,000 ರೂಪಾಯಿಗಳನ್ನು ವ್ಯಯಿಸಲಾಗುತ್ತದೆ.

ನಾನೆಂದು ಮಾರಾಟ ಮಾಡುವುದಿಲ್ಲ – ಮಾಲೀಕ
ಇನ್ನು ಈ ಬೆಲೆಬಾಳುವ ಎಮ್ಮೆಗೆ ಈಗ 8 ವರ್ಷ ವಯಸ್ಸಾಗಿದೆ. ಮಾಲೀಕ ಪಲ್ವಿಂದರ್ ಸಿಂಗ್ ಚೆನ್ನಾಗಿ ಆರೈಕೆ ಮಾಡುತ್ತಿದ್ದಾರೆ. ಮಾಲೀಕ ಪಲ್ವಿಂದರ್ ಸಿಂಗ್ ಅನ್ಮೋಲ್ ಅವರನ್ನು ಸಹೋದರನಂತೆ ಪರಿಗಣಿಸುತ್ತಾರೆ ಮತ್ತು ಸಹೋದರನನ್ನು ಎಂದಿಗೂ ಮಾರಾಟ ಮಾಡಲು ಇಷ್ಟಪಡುವುದಿಲ್ಲವಂತೆ. ಅನ್ಮೋಲ್ ತನ್ನ ಕುಟುಂಬದ ಭಾಗವಾಗಿದ್ದಾನೆ, ಆದ್ದರಿಂದ ಅವನು ಅವನನ್ನು ಎಂದಿಗೂ ಮಾರಾಟ ಮಾಡುವುದಿಲ್ಲ. ಬದಲಿಗೆ, ಅವರು ಎಮ್ಮೆಗಳ ತಳಿಯನ್ನು ಸುಧಾರಿಸಲು ಸಹಾಯ ಮಾಡಲು ಅನ್ಮೋಲ್‌ನ ವೀರ್ಯವನ್ನು ಮಾತ್ರ ಮಾರಾಟ ಮಾಡುತ್ತಾರೆ.

Related posts

Leave a Comment