ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಫೋಟೋ ಲೀಕ್: ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಆದರೆ ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯ ಮೊದಲ ಫೋಟೋ ಲೀಕ್ ಆಗಿದೆ.
ಈ ಬೈಕ್ ನವೆಂಬರ್ 4 ರಂದು ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದೆ. ಆದರೆ ಅದಕ್ಕೂ ಮೊದಲೇ ಫೋಟೊ ಬಿಡುಗಡೆಯಾಗಿರುವುದು ಎನ್‌ಫೀಲ್ಡ್ ಬೈಕ್ ಲವರ್ಸ್ ತೀವ್ರ ಕುತೂಹಲ ಕೆರಳಿಸಿದೆ.
ಬೈಕ್ ಉತ್ಪಾದನಾ ಕಂಪನಿಯು ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಕುರಿತು ಟೀಸರ್ ಅನ್ನು ಹಂಚಿಕೊಂಡಿದೆ, ಇದರಲ್ಲಿ ವಾಹನ ತಯಾರಕರು ನವೆಂಬರ್ 4 ರ ವಿಶೇಷ ದಿನಾಂಕವನ್ನು ನೀಡಿದ್ದು, ಈ ದಿನ EV ರಾಯಲ್ ಎನ್‌ಫೀಲ್ಡ್ ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಊಹಿಸಬಹುದಾಗಿದೆ.
ಬೈಕ್ ತಯಾರಕರು ಈ ಬೈಕ್‌ನ ಫೀಚರ್ ಮತ್ತು ಕಾರ್ಯಕ್ಷಮತೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇದೀಗ ಬ್ರಿಟಿಷ್ ವಾಹನ ತಯಾರಕ ಸಂಸ್ಥೆಯು ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಉಳಿದಿವೆ, ಆದರೆ ಅದಕ್ಕೂ ಮೊದಲು ಈ EV ಯ ಮೊದಲ ಫೋಟೋವನ್ನು ಬಹಿರಂಗಪಡಿಸಲಾಗಿದೆ. ಈ ಚಿತ್ರವನ್ನು MCN ಹಂಚಿಕೊಂಡಿದೆ. ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್‌ನ ಈ ಮಾದರಿಯು ಬೈಕ್‌ನ ಮೂಲ ಮಾದರಿಯಾಗಿರಬಹುದು ಎನ್ನಲಾಗಿದೆ.
ಇತರ ಬೈಕ್‌ಗಳಿಗೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಸ್ಲಿಮ್ ಬಾಡಿಯೊಂದಿಗೆ ಬರಬಹುದು. ಈ EV ನಗರವಾಸಿಗಳಿಗೆ ಹೇಳಿ ಮಾಡಿಸಿದಂತಿರಲಿದೆ.ಸ್ಥಳೀಯವಾಗಿ ಓಡಾಡುವ ವಾಹನ ಸವಾರರಿಗೆ ಉತ್ತಮ ಆಯ್ಕೆಯಾಗಬಹುದು. ರಾಯಲ್ ಎನ್‌ಫೀಲ್ಡ್‌ನ ಇತರ ಬೈಕ್‌ಗಳಿಗೆ ಹೋಲಿಸಿದರೆ ಈ ಮೋಟಾರ್‌ಸೈಕಲ್‌ನ ನೋಟವು ವಿಭಿನ್ನವಾಗಿದೆ. ರಾಯಲ್ ಎನ್‌ಫೀಲ್ಡ್‌ನ ಈ ಎಲೆಕ್ಟ್ರಿಕ್ ಬೈಕ್‌ನ ವ್ಯಾಪ್ತಿಯು 100 ರಿಂದ 160 ಕಿಲೋಮೀಟರ್‌ಗಳ ನಡುವೆ ಇರಬಹುದು ಎಂದು ಊಹಿಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್‌ನ ಪವರ್‌ಟ್ರೇನ್ ಮತ್ತು ಅದರ ಮಾಡೆಲ್ ವಾಹನದ ಬೆಲೆಯನ್ನು ಹೆಚ್ಚಿಸಬಹುದು. ಈ EV ಯ ಬೆಲೆ ಸಾಂಪ್ರದಾಯಿಕ ಬೈಕ್‌ಗಿಂತ ಹೆಚ್ಚಿರಬಹುದು. ಆದರೆ ಮೊದಲಿನಂತಿರದೆ ಇವಿ ಬೈಕ್‌ನಲ್ಲಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ, ಇದು ರೈಡಿಂಗ್ ಮೋಡ್‌ಗಳ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿರುತ್ತದೆ. ಈ ಮೋಟಾರ್‌ಸೈಕಲ್‌ನಲ್ಲಿ ಅಲಾಯ್ ಚಕ್ರಗಳ ಜೊತೆಗೆ ಡಿಸ್ಕ್ ಬ್ರೇಕ್‌ಗಳನ್ನು ಸಹ ಕಾಣಬಹುದು.
ಮೊದಲನೆಯದಾಗಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದ ನಂತರ, ರಾಯಲ್ ಎನ್‌ಫೀಲ್ಡ್ ಇನ್ನಷ್ಟು ಹೆಚ್ಚಿನ ಮಾದರಿಗಳನ್ನು ಪರಿಚಯಿಸಬಹುದು. ಇದರ ನಂತರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನ ಎಲೆಕ್ಟ್ರಿಕ್ ಮಾದರಿಯನ್ನು ತರಬಹುದು ಎಂದು ನಿರೀಕ್ಷಿಸಲಾಗಿದೆ.
Royal Enfield’s first Electric Bike: Unveiling on November 4, 2024
One of the most significant developments is the confirmation of its first electric bike, which is set to launch on November 4, 2024, just ahead of the EICMA show.
The announcement has sparked interest among enthusiasts eager to see how the brand blends its iconic neo-retro style with a cutting-edge electric powertrain. Earlier this year, a leaked patent design offered a glimpse of a production-ready electric bike that features a blend of modern and retro elements inspired by the classic range.