Mangalore and Udupi news
ಅಪರಾಧರಾಜ್ಯ

ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರೆ ಟಾರ್ಗೆಟ್: ಕ್ಷಣಾರ್ಧದಲ್ಲಿ ಹಣ,ಒಡವೆ ಎಗರಿಸಸುವ ಖತರ್ನಾಕ್ ಕಳ್ಳಿ.!!

ಬಸ್‌ನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರೆ ಈಕೆಯ ಟಾರ್ಗೆಟ್. ಅಂತರರಾಜ್ಯ ಖತರ್ನಾಕ್ ಕಳ್ಳಿ ಇದೀಗ ಚಾಮರಾಜನಗರ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾಳೆ. ಮಹಿಳೆಯರ ವ್ಯಾನಿಟಿ ಬ್ಯಾಗ್ ನಿಂದ ಕ್ಷಣಾರ್ಧದಲ್ಲಿ ಹಣ, ಚಿನ್ನಾಭರಣ ದೋಚುತ್ತಿದ್ದ ಚಾಲಾಕಿ.

ಈಕೆ ಹೆಸರು ಲಕ್ಷ್ಮಿ. ನೋಡಲು ಅಮಾಯಕಿಯಂತೆ ಕಾಣ್ತಾಳೆ. ಮಾಡೋದೆಲ್ಲ ಖತರ್ನಾಕ್ ಕಳ್ಳ ಕೆಲಸ. ತಮಿಳುನಾಡು ಮೂಲದ ಈಕೆ ಕರ್ನಾಟಕ ಹಾಗು ತಮಿಳುನಾಡು ನಡುವೆ ಸಂಚರಿಸುವ ಬಸ್‌ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರೇ ಈಕೆಯ ಟಾರ್ಗೆಟ್.

ಮಹಿಳೆಯರನ್ಮು ಪರಿಚಯ ಮಾಡಿಕೊಂಡು ಅವರಿಗೆ ಗೊತ್ತಾಗದಂತೆ ಅವರ ಬ್ಯಾಗ್ ಗಳಲ್ಲಿ ಇಟ್ಟಿರುವ ಹಣ ಒಡವೆ ಎಗರಿಸಿ ಯಾರಿಗೂ ಗೊತ್ತಾಗದಂತೆ ಬಸ್ ಇಳಿದು ಮಾಯವಾಗಿಬಿಡುತ್ತಾಳೆ.

ಕಳೆದ ತಿಂಗಳು 9ನೇ ತಾರೀಖು ತಮಿಳುನಾಡಿನ ಸತ್ಯಮಂಗಲಕ್ಕೆ ಹೊರಟಿದ್ದ ಚಾಮರಾಜನಗರದ ಪುಷ್ಪಲತಾ ಸಂಬಂಧಿಕರ ಮದುವೆಯಿದ್ದ ಕಾರಣ 540 ಗ್ರಾಂ ನಷ್ಟು ಚಿನ್ನಾಭರಣವನ್ನ ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿಟ್ಟು ಕೊಂಡೊಯ್ಯುತ್ತಿದ್ದರು. ಪುಷ್ಪಲತಾ ಪ್ರಯಾಣಿಸುವ ಬಸ್ ನಲ್ಲೇ ಆರೋಪಿ ಲಕ್ಷ್ಮೀ ಸಹ ಪ್ರಯಾಣ ಮಾಡ್ತಾಯಿದ್ಲು. ಮೊದಲಿಗೆ ಅವರ ಪಕ್ಕ ಕೂತು ಪರಿಚಯ ಮಾಡಿಕೊಂಡ ಲಕ್ಷಿ ಅದು ಇದು ಮಾತನಾಡುತ್ತಾ ಪುಷ್ಪಲತಾರ ಗಮನ ಬೇರೆಡೆ ಸೆಳೆದಿದ್ದಾಳೆ.

ವ್ಯಾನಿಟಿ ಬ್ಯಾಗ್ ನಿಂದ ಕ್ಷಣಾರ್ಧದಲ್ಲಿ ಬರೋಬ್ಬರಿ ಅರ್ಧ ಕೆಜಿ ಚಿನ್ನ ದೋಚಿ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಬಸ್ ಇಳಿದು ಕ್ಷಣಾರ್ಧದಲ್ಲಿ ಮಾಯವಾಗಿದ್ದಾಳೆ. ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು. ಕಳ್ಳಿ ಲಕ್ಷ್ಮೀಯನ್ನು ಕುಂಬಾರಾಗುಂಡಿ ಬಳಿ ಬಂಧಿಸಿ ಸದ್ಯ 430 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡಿದ್ದಾರೆ.

ಬಂಧಿತ ಲಕ್ಷ್ಮಿ ಆರೋಪಿತೆಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇವಲ ಮೂರೇ ದಿನಗಳಲ್ಲಿ ಚಾಮರಾಜನಗರ ಪೊಲೀಸರು ಅಂತರರಾಜ್ಯ ಕಳ್ಳಿ ಲಕ್ಷ್ಮಿ ಯನ್ನು ಜೈಲಿಗಟ್ಟಿದ್ದಾರೆ. ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಇನ್ನಷ್ಟು ಪ್ರಕರಣಗಳನ್ನು ಭೇದಿಸಲು ಮುಂದಾಗಿದ್ದಾರೆ.

Related posts

Leave a Comment