
ಬಂಟ್ವಾಳ : ಶ್ರೀ ಪಂಜುರ್ಲಿ-ಪಿಲಿಚಾಮುAಡಿ, ಕಲ್ಲುರ್ಟಿ-ಕಲ್ಕುಡ ದೈವಸ್ಥಾನ ರಾಯರ ಚಾವಡಿ, ಬಡ್ಡಕಟ್ಟೆ ಇಲ್ಲಿ ಜನವರಿ 24 ಹಾಗೂ 55ರಂದು ನೇಮೋತ್ಸವ ಜರಗಲಿದೆ.
ತಾ. 24-01-2025ನೇ ಶುಕ್ರವಾರ ಶ್ರೀ ಸತ್ಯನಾರಾಯಣ ದೇವರ ಪೂಜೆ, ಅನ್ನಪ್ರಸಾದ, ಶ್ರೀ ಪಿಲಿಚಾಮುಂಡಿ, ಕಲ್ಕುಡ ದೈವಗಳಿಗೆ – ನೇಮೋತ್ಸವ ನಡೆಯಲಿದೆ.
ತಾ. 25-01-2025ನೇ ಶನಿವಾರ ಶ್ರೀ ಪಂಜುರ್ಲಿ ದೈವಕ್ಕೆ – ಎಣ್ಣೆ ಬೂಳ್ಯ, ಶ್ರೀ ಪಂಜುರ್ಲಿ, ಕಲ್ಲುರ್ಟಿ ದೈವಗಳಿಗೆ – ನೇಮೋತ್ಸವ ನಡೆಯಲಿದೆ.
ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.