Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಭಿಕ್ಷಾಟನೆ ಮಾಡುತ್ತಾ ಬಂದ ಫಕೀರ 75 ವರ್ಷದ ವೃದ್ಧೆಯ ಅತ್ಯಾಚಾರ ಮಾಡಿ ಪರಾರಿ.!!

ಕೃಷಿ ಕೆಲಸಕ್ಕೆ ಮನೆ ಮಂದಿಯೆಲ್ಲಾ ಹೋಗಿದ್ದ ವೇಳೆಯನ್ನು ದುರುಪಯೋಗ ಮಾಡಿಕೊಂಡ ಫಕೀರನೊಬ್ಬ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ಘಟನೆ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮಕ್ಕೆ ಭಿಕ್ಷಾಟನೆ ಮಾಡಲು ಬಂದ ಫಕೀರ ಮನೆಯಲ್ಲಿ ಯಾರೂ ಇಲ್ಲದಾಗ ಅಜ್ಜಿ ಒಬ್ಬಂಟಿಯಾಗಿದ್ದ ಮನೆಯೊಳಗೆ ನುಗ್ಗಿ ಅಜ್ಜಿಯ ಮೇಲೆ ಅತ್ಯಾಚಾರ ಮಾಡಿ ಬಂದಿದ್ದಾನೆ. ಅತ್ಯಾಚಾರ ಮಾಡಿದವನನ್ನು ಅದೇ ಗ್ರಾಮದ ಪಕ್ಕದ ಐನೊಳ್ಳಿ ಗ್ರಾಮದ ಫಕೀರ ತಯ್ಯಬ್ ಎಂದು ಗುರುತಿಸಲಾಗಿದೆ.

Kalaburagi 75 year old woman raped by Muslim fakir sat

ಫಕೀರ ವೇಷಧಾರಿ ತಯ್ಯಬ್ ಬಿಕ್ಷಾಟನೆ ಮಾಡುತ್ತಾ ಊರಿರು ಸುತ್ತುತ್ತಿದ್ದನು. ಆದರೆ, ಚಂದ್ರಪಳ್ಳಿ ಗ್ರಾಮದಲ್ಲಿ 75 ವರ್ಷದ ನಿಸ್ಸಾಹಾಯಕ ಅಜ್ಜಿಯ ಮೇಲೆ ಅತ್ಯಾಚಾರಗೈದು ಹೀನ ಕೃತ್ಯವೆಸಗಿದ್ದಾನೆ. ಇನ್ನು ಅತ್ಯಾಚಾರ ಘಟನೆಯ ಬೆನ್ನಲ್ಲಿಯೇ ತೀವ್ರ ಅಸ್ವಸ್ಥಗೊಂಡಿದ್ದ ಅಜ್ಜಿಯನ್ನು ಸ್ಥಳೀಯರು ಬೀದರ್ ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಅಜ್ಜಿಯ ಸ್ಥಿತಿ ಗಂಭೀರವಾಗಿದೆ. ಅತ್ಯಾಚಾರ ಮಾಡಿದ ಆರೋಪಿ ಫಕೀರ ತಯ್ಯಬ್ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಈ ಘಟನೆಯ ಬೆನ್ನಲ್ಲಿಯೇ ಪೊಲೀಸರು ಈ ಫಕೀರ ಸಿಕ್ಕಲ್ಲಿ ಸುಳಿವು ನೀಡುವಂತೆ ಸುತ್ತಲಿನ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

Related posts

Leave a Comment