ಅಯೋಧ್ಯಾ ರಾಮಜನ್ಮಭೂಮಿಯಲ್ಲಿ ಮೊದಲ ವರ್ಷದ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ಸಿದ್ಧತೆಗಳು ಕೂಡ ಜೋರಾಗಿಯೇ ನಡೆದಿವೆ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗಾಗಿ ಐನೂರು ವರ್ಷಗಳ ಕಾಲ ಕಾಯ್ದಿದ್ದ ರಾಮಭಕ್ತರಿಗೀಗ ಸಂಭ್ರಮದ ಕಾಲ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾದ ಮೇಲೆ ಮೊದಲ ಬಾರಿ ರಾಮಮಂದಿರದಲ್ಲಿ ಆಚರಿಸಲಾಗುತ್ತಿರುವ ದೀಪಾವಳಿಯನ್ನು ಬೇರೆಯದ್ದೇ ಸಂಭ್ರಮದಲ್ಲಿ ಆಚರಿಸಲು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಿರಿಸಿದೆ.
ಉತ್ತರಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೀಪಾವಳಿಯಂದು ಸರಯೂ ನದಿ ತೀರದಲ್ಲಿ ಹಿಂದೆಂದೂ ಕಾಣದ ದೀಪಗಳ ಬೆಳಕು ಹೊಮ್ಮಲಿದೆಯಂತೆ. ಯೋಗಿ ಸರ್ಕಾರ ಹೇಳುವ ಪ್ರಕಾರ ದೀಪಾವಳಿಯಂದು ಹೊಸ ಜಗತ್ತೇ ರಾಮಮಂದಿರದ ಅಂಗಳದಲ್ಲಿ ಹಾಗೂ ಸರಯೂ ನದಿ ತೀರದಲ್ಲಿ ಸೃಷ್ಟಿಯಾಗಲಿದೆಯಂತೆ ಸುಮಾರು 25 ರಿಂದ 28 ಲಕ್ಷ ದೀಪಗಳನ್ನು ಬೆಳಗಿ ಹೊಸ ದಾಖಲೆಯ ಲಕ್ಷ ದೀಪೋತ್ಸವ ಆಚರಣೆಗೆ ಯೋಗಿ ಸರ್ಕಾರ ಸಿದ್ಧವಾಗಿದೆ.
ಇನ್ನು ಲಕ್ಷ ದೀಪೋತ್ಸವದ ವೇಳೆ ಪರಿಸರ ಸ್ನೇಹಿ ಹಣತೆಗಳನ್ನು ಬೆಳಗಿಸಲಾಗುವುದು ಎಂದು ಹೇಳಲಾಗಿದೆ. ಈ ದೀಪಗಳಿಂದ ರಾಮಮಂದಿರದ ಗೋಡೆಗಳಿಗಾಗಲಿ, ಅಂಗಳದಲ್ಲಾಗಲಿ ಕಲೆ ಅಥವಾ ಮಸಿ ಅಂಟುವುದಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಅಂದುಕೊಂಡಂತೆ ಲಕ್ಷ ದೀಪೋತ್ಸವ ನಡೆಸುವ ಕಾರ್ಯವು ಶೇಕಡಾ 95 ರಷ್ಟು ಮುಗಿದಿದ್ದು. ಈ ಒಂದು ಲಕ್ಷದೀಪೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಸುಮಾರು 10 ಸಾವಿರ ಭಕ್ತರಿಗೆ ಅವಕಾಶ ನೀಡಲಾಗಿದೆ.
ರಾಮ್ ಕಿ ಪೈಡಿಯಲ್ಲಿ ವೀಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದ್ದು. ದೀಪಾವಳಿ ಹಬ್ಬದ ಮುಂಚೆಯೇ ಅದು ಕೂಡ ಸಿದ್ಧಗೊಳ್ಳಿದೆ. ಕಳೆದ ಬಾರಿ ಉತ್ತರಪ್ರದೇಶದಲ್ಲಿ ಒಟ್ಟು 51 ಘಾಟ್ಗಳಲ್ಲಿ ದೀಪೋತ್ಸವ ಆಚರಿಸಲಾಗಿತ್ತು. ಈ ಬಾರಿ 55 ಘಾಟ್ಗಳಲ್ಲಿ ದೀಪೋತ್ಸವ ಆಚರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
The Uttar Pradesh government aims to create a new world record this Diwali by lighting 28 lakh lamps along the banks of the Saryu river. This festival is also very special for the city as it is the first Diwali at the newly built Shri Ram Janmabhoomi temple.