ಮಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ವಿರೋಧಿಸಿ ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ಗುರುವಾರ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿತು.
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ವಿರೋಧಿಸಿ ಎಸ್ಡಿಪಿಐ ಏಕಕಾಲಕ್ಕೆ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆಗೆ ಕರೆನೀಡಿದ್ದು, ಇದರ ಭಾಗವಾಗಿ ಮಂಗಳೂರು ಹೃದಯ ಭಾಗವಾದ ರಾವ್ & ರಾವ್ ಸರ್ಕಲ್’ನಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಕೇಂದ್ರ ಸರ್ಕಾರದ ಮುಸ್ಲಿಮ್ ವಿರೋಧಿ ದೋರಣೆಯನ್ನು ಖಂಡಿಸಿ ಘೋಷಣೆ ಕೂಗಲಾಯಿತು. ಅಲ್ಲದೇ ಈ ಮಸೂದೆಯ ಪ್ರತಿಯನ್ನು ಹರಿಯುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಈ ಪ್ರತಿಭಟನೆಯಲ್ಲಿ ಎಸ್ಡಿಪಿಐ ಮಂಗಳೂರು ನಗರ ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಎಸ್ಡಿಪಿಐ ಮುಖಂಡರಾದ ಝಾಹಿದ್ ಮಲಾರ್, ಶಾಹುಲ್ ಕಾಶಿಪಟ್ನ, ಸುಹೈಲ್ ಖಾನ್, ಯಾಸೀನ್ ಅರ್ಕುಳ, ಅಕ್ಬರ್ ರಝಾ ಕುದ್ರೋಳಿ ಸೇರಿದಂತೆ ಜಿಲ್ಲಾ, ಕ್ಷೇತ್ರ ವ್ಯಾಪ್ತಿಯ ಹಲವು ನಾಯಕರು ಉಪಸ್ಥಿತರಿದ್ದರು.
