
ಕಾರ್ಕಳ : ಶ್ರೀ ಕ್ಷೇತ್ರ ನೆಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಪುತ್ತೂರು ಜಗದೀಶ್ ಆಚಾರ್ಯ ಸ್ವರ ಮಾಧುರ್ಯದೊಂದಿಗೆ ಮೂಡಿಬಂದ ಪಾವನ ಕ್ಷೇತ್ರ ಶ್ರೀ ನೆಲ್ಲಿ ಭಕ್ತಿ ಗೀತೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ನಡೆಯಿತು.
ಉದ್ಯಮಿಗಳಾದ ಅರುಣ್ ಸೇನ್, ಆಳ್ವಾಸ್ ವಿದ್ಯಾಸಂಸ್ಥೆಯ ಅಂಬರೀಶ್ ಚಿಪ್ಯೂಣ್ಯರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚೇತನ್ ನಾಯಕ್, ಆಡಳಿತ ಮೋಕೇಸರರಾದ ಸುನಿಲ್ ಕೆ ಆರ್ ವೇದಿಕೆ ಉಪಸ್ಥಿತಿಯಿದ್ದರು.
ನೆಲ್ಲಿ ಕ್ಷೇತ್ರವು ಜೀರ್ಣವ್ಯವಸ್ಥೆ ಇದ್ದಂತ ಸಂದರ್ಭದಲ್ಲಿ ಊರ ಪರ ಊರ ದಾನಿಗಳಿಂದ ಜೀರ್ಣೋದ್ಧಾರ ಗೊಳ್ಳುತ್ತಿದೆ ಸುಮಾರು 9 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗಿದ್ದು, ಬ್ರಹ್ಮಕಲಶೋತ್ಸವ 2025ರ ಜನವರಿ 28ರಿಂದ ಆರಂಭವಾಗಿ ಫೆಬ್ರವರಿ 5ರವೆರೆಗೆ ಅದ್ಧೂರಿಯಾಗಿ ವಿವಿಧ ಧಾರ್ಮಿಕ ವಿಧಿವಿಧಾನ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ವಿಜ್ರಂಭಣೆಯಿoದ ನಡೆಯಲಿದೆ.