Mangalore and Udupi news
ದಕ್ಷಿಣ ಕನ್ನಡಪ್ರಸ್ತುತ

ಸುರತ್ಕಲ್: ಅತ್ಯಾಚಾರ, ಕೊಲೆ ಬೆದರಿಕೆ ಘಟನೆಗೆ ತೀವ್ರ ಖಂಡನೆ – ಆರೋಪಿಗೆ ಶಿಕ್ಷೆಯಾಗುವವರೆಗೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಹೋರಾಡುತ್ತದೆ; ಪವಿತ್ರ ನಿರಂಜನ್

ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಧಕ್ಕೆಯಾದಾಗ, ಹಿಂದೂ ಹೆಣ್ಣುಮಕ್ಕಳ ಮೇಲೆ ಅನ್ಯಮತೀಯರಿಂದ ಕಿರುಕುಳ, ತೊಂದರೆಯಾದಾಗ ಹಿಂದೂ ಸಮಾಜ ಹೋರಾಟ, ಪ್ರತಿಭಟನೆ ಮಾಡಿ ಸುಮ್ಮನಿರುತ್ತದೆ ಎಂಬ ಯೋಚನೆಯಿದ್ದರೆ ಅದು ನಿಮ್ಮ ಭ್ರಮೆಯಷ್ಟೆ.! ಸಾಮ..ಧಾನ..ಭೇದ ಮುಗಿದಿದೆ.. ಕೊನೆಯದಾಗಿ ಅಗತ್ಯವಿರುವ “ದಂಡ” ಎಂಬ ಅಸ್ತ್ರವನ್ನು ಹಿಂದೂ ಸಮಾಜ ತಂಡವಾಗಿ ಪ್ರಯೋಗ ಮಾಡುವ ಮೊದಲು ಅನ್ಯ ಧರ್ಮದ ಹಿರಿಯರು, ಸಮುದಾಯದ ಮುಖಂಡರು ತಮ್ಮವರಿಗೆ ಬುದ್ಧಿ ಹೇಳಿ ತಿದ್ದುವ ಕೆಲಸ ಮಾಡಲಿ ಎಂದು ಹಿಂದೂ ಕಾರ್ಯಕರ್ತೆ ಪವಿತ್ರ ನಿರಂಜನ್ ಹೇಳಿದ್ದಾರೆ.

ಸುರತ್ಕಲ್ ಭಾಗದ ಹಿಂದೂ ಹೆಣ್ಣುಮಗಳಿಗೆ ಜಿಹಾದಿ ಮನಸ್ಥಿತಿಯವನೊಬ್ಬ ಅತ್ಯಾಚಾರ, ಕೊಲೆ ಬೆದರಿಕೆ ನೀಡಿರುವ ಘಟನೆಯನ್ನು ಖಂಡಿಸುವ ಮೂಲಕ ಈ ಆರೋಪಿಗೆ ತಕ್ಕ ಶಿಕ್ಷೆಯಾಗುವವರೆಗೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಹೋರಾಡುತ್ತದೆ ಮತ್ತು ಇದರಿಂದಾಚೆಗೆ ಇಂತಹ ಹೇಯ ಕೃತ್ಯ ನಡೆಸಲು ಮುಂದೆ ಯಾವೊಬ್ಬ ಮತಾಂಧನೂ ಭಯ ಪಡುವಂತಹ ಕ್ರಮ ಕಾನೂನು ಮೂಲಕ ರವಾನೆಯಾಗುವ ಮೂಲಕ ಆ ಹೆಣ್ಣಿಗೆ ನ್ಯಾಯ ಸಿಗುವವರೆಗೂ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.

ಇಂದು ಆ ಹೆಣ್ಣಿಗಾದ ಪರಿಸ್ಥಿತಿ ನಾಳೆ ನಮ್ಮ ಮನೆ ಮಗಳಿಗೋ, ನಮ್ಮ ಸುತ್ತಮುತ್ತಲಿನ ಹೆಣ್ಣುಮಕ್ಕಳಿಗೋ ಬಂದೊದಗುವ ಮೊದಲು ನಮ್ಮ ಹಿಂದೂ ಸಮಾಜ ಎಚ್ಚೆತ್ತು, ಹಿಂದೂ ಮಾತೆಯರು ಒಂದಾಗಿ ಈ ಹೆಣ್ಣಿಗೆ ನ್ಯಾಯ ಕೊಡಿಸಲು ಒಕ್ಕೊರಳ ಧ್ವನಿಯಾದರೆ ಅಂತಹ ಹೀನ ಮನಸ್ಥಿತಿಯ ಜಿಹಾದಿಗಳಿಗೆ ಮುಂದೆ ಅಂತಹ ತಪ್ಪೆಸಗಲು ಭಯ ಪಡುವ ಎಚ್ಚರಿಕೆಯ ಸಂದೇಶ ನೀಡಿದಂತಾಗುತ್ತದೆ.

ಜಿಹಾದಿ ಶಕ್ತಿಗಳಿಂದ ಲವ್ ಜಿಹಾದ್, ಅತ್ಯಾಚಾರ, ಕೊಲೆಯಂತಹ ಹೇಯ ಕೃತ್ಯಗಳು ಹಿಂದೂ ಹೆಣ್ಣುಮಕ್ಕಳ ಮೇಲೆ ಪದೇ ಪದೇ ನಡೆದಾಗ ಇಂತಹ ದೌರ್ಜನ್ಯವೆಸಗುವವರಿಗೆ ಕಾನೂನು ಮೂಲಕ ಶಿಕ್ಷೆಯಾದರೂ ಯಾರದೋ ಪ್ರಭಾವ ಬಳಸಿ, ಜಾಮೀನು ಪಡೆದೋ ತಪ್ಪಿಸಿಕೊ ಳ್ಳಬಹುದೆಂಬ ಅರಿವಿದೆ.

ಜಿಹಾದಿ ಮನಸ್ಥಿತಿಯಂತವುಗಳಿ0ದ ಸಾವು ನೋವು ಅನುಭವಿಸಿರುವ ಉದಾಹರಣೆಯಾಗಿ ದೇಶದಾದ್ಯಂತ ನಡೆದಿರುವ, ನಾವು ಕೇಳಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣಮುಂದಿದೆ..ಹಾಗಾಗಿ ವಿಶೇಷವಾಗಿ ಜಿಹಾದಿಗಳಿಂದ ಹಿಂದೂ ಹೆಣ್ಣುಮಕ್ಕಳ ರಕ್ಷಣೆಗೆಂದೇ ಒಂದು ವಿಶೇಷ ಕಾನೂನು ಬಂದರೆ ಉತ್ತಮ..ಇಲ್ಲದಿದ್ದಲ್ಲಿ ಇದಕ್ಕೊಂದು ಅಂತ್ಯ ನೀಡಲು ಹಿಂದೂ ಸಮಾಜ ತನ್ನದೇ ಪರ್ಯಾಯ ವ್ಯವಸ್ಥೆಯ ಮೂಲಕ ದಾರಿ ಕಂಡುಕೊಳ್ಳುವ ದಿನಗಳು ಬಂದರೂ ಅಚ್ಚರಿಯಿಲ್ಲ.! ನಿಮಗಿದೊ ಕೊನೆಯ ಎಚ್ಚರಿಕೆ ಎಚ್ಚೆತ್ತುಕೊಳ್ಳಿ ಇಲ್ಲವೇ ಮುಂದಿನ ಪರಿಣಾಮಕ್ಕೆ ಸಿದ್ದರಾಗಿರಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Related posts

Leave a Comment