ಮಂಗಳೂರು : ನಾಗೇಶ್ ಕುಲಾಲ್ ರವರ ನೇತೃತ್ವದ ಕಲಾಕುಂಭ ಕುಳಾಯಿ ಇದರ ತುಳು ಪಾಡ್ದನ ಆಧಾರಿತ ತುಳು ಪೌರಾಣಿಕ ನಾಟಕ “ಪರಮಾತ್ಮೆ ಪಂಜುರ್ಲಿ” ಮಂಗಳೂರು ಪುರಭವನ ದಲ್ಲಿ ನಡೆದ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದ್ದು, ಈ ನಾಟಕದ ಯಶಸ್ಸಿನ ಕಾರಣಿಕರ್ತರನ್ನ ಗುರುತಿಸಿ ಗೌರವಿಸಲಾಯಿತು.
ನಾಟಕಕ್ಕೆ ಪಾಡ್ದನ ಸಾಹಿತ್ಯ ನೀಡಿದ ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್, ಸಾಹಿತ್ಯ ಸಂಭಾಷಣೆ ಬರೆದ ಕುಳಾಯಿ ಮಾಧವ ಭಂಡಾರಿ, ಸಂಗೀತ ನಿರ್ದೇಶಕ ಗುರುರಾಜ್ ಸಾಯಿರಾಂ ಸ್ಟುಡಿಯೋ, ಧನಂಜಯ ಮುಲ್ಕಿ, ರಂಗವಿನ್ಯಾಸ ಮಾಡಿದ ರಾಜೇಶ್ ಬಂಗೇರ ಕದ್ರಿಕಂಬ್ಲ, ಜಯಂತ ಪಡೀಲ್ , ವಸ್ತ್ರಾಲಂಕಾರ ಮಾಡಿದ ದಿನೇಶ್ ಮಾಸ್ಟರ್ ವರ್ಣಲಾಂಕರ ಆರ್ಟ್ಸ್ ದ್ವನಿ ಮತ್ತು ಬೆಳಕು ನೀಡಿದ ಹರಿಪ್ರಸಾದ್, ಸುಕೇಶ್, ನಿರ್ದೇಶನ ಮಾಡಿದ ಕಾರ್ತಿಕ್ ಕುಲಾಲ್, ಅಕ್ಷಯ್ ಕುಳಾಯಿ, ವೈಶಾಖ ಸೂರಿಂಜೆ ರವರನ್ನು ತುಳು ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷರು ಲ.ಕಿಶೋರ್ ಶೆಟ್ಟಿ ಕಲಾಸಂಗಮದ ಸ್ಥಾಪಕರು ವಿಜಯಕುಮಾರ್ ಕೊಡಿಯಾಲ್ ಬೈಲ್, ಸನಾತನ ನಾಟ್ಯಾಲಯದ ಚಂದ್ರಶೇಖರ್ ಶೆಟ್ಟಿ, ಬರ್ಕೆ ಫ್ರೆಂಡ್ಸ್ ನ ಗೌರವಾಧ್ಯಕ್ಷ ಯಜ್ಞೇಶ್ ಬರ್ಕೆ, ಕೊಡುಗೈ ದಾನಿ ಶ್ರೀಮತಿ ಸಾವಿತ್ರಿ ಮಹಾಬಲ ಹಾಂಡ, ಯಕ್ಷಗುರು ಶ್ರೀಮತಿ ಪೂರ್ಣಿಮಾ ಯತೀಶ್ ರೈ, ಯಕ್ಷಗಾನ ನಾಟಕ ರಚನೆಗಾರ ಶ್ರೀನಿವಾಸ್ ಸಾಲಿಯಾನ್ ಬೊಂದೆಲ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ರಾಜ್ ಭಂಡಾರಿ ದುಬೈ, ಸಮಾಜ ಸೇವಕ ಮನೋಜ್ ಕೋಡಿಕೆರೆ ಸನ್ಮಾನಿಸಿದರು.
ಕಲಾಕುಂಭ ಕುಳಾಯಿ ಇದರ ಅದ್ಯಕ್ಷ ನಾಗೇಶ್ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ನಾರಾಯಣ್ ಹೊಸಬೆಟ್ಟು ವಂದಿಸಿದರು. ಯೆಚ್.ಕೆ ನೈನಾಡ ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಕುಲಾಲ್, ಸತೀಶ್ ತದಂಬೈಲ್, ವಸಂತ್ ಪಡೀಲ್, ದಯಾನಂದ್ ಶೆಟ್ಟಿಗಾರ್, ಆಶಾ ರಾಜು ಕೊಟ್ಟಾರ, ಶೈಲಜಾ, ದಯಾನಂದ ಕತ್ತಲ್ ಸಾರ್, ದರ್ಶನ್ ಕುಳಾಯಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.