ಪಡುಬಿದ್ರಿ: ಬೆಳಪು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಯೂರಿನಲ್ಲಿ ಬೃಹತ್ ಮರವೊಂದು ರಾತ್ರಿ ಏಕಾಏಕಿ ರಸ್ತೆಗೆ ಬಿದ್ದಿದ್ದು ಅದೃಷ್ಟವಶಾತ್ ಬೈಕ್ ಸವಾರನೋರ್ವ ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ.
ಪಣಿಯೂರು ಪೇಟೆಯ ಸಮೀಪ ಶಿಕ್ಷಕರೊರ್ವರ ಖಾಸಗಿ ಸ್ಥಳದಲ್ಲಿದ್ದ ಗೋಳಿ ಮರ ಇದಾಗಿದ್ದು, ಈ ಹಿಂದೆ ಇದರ ರೆಂಬೆಗಳನ್ನು ಕಡಿಯಲಾಗಿದ್ದು, ಮರ ಬೀಳುವ ಸ್ಥಿತಿಯಲ್ಲೇ ಇತ್ತು ಎಂಬುದಾಗಿ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಹೇಳುತ್ತಾರೆ.
ಪಕ್ಕದಲ್ಲೇ ಶಾಲೆಯೊಂದಿದ್ದು ಶಾಲಾ ಮಕ್ಕಳು ಸಂಚರಿಸುವ ಹೊತ್ತಲ್ಲಿ ಇಲ್ಲವೇ ಹಗಲು ಹೊತ್ತಲ್ಲಿ ಬಾರೀ ಜನ ಸಂಚಾರವಿರುವ ವೇಳೆ ಮರ ಬಿದ್ದಿದ್ದರೇ ಬಾರೀ ಅನಾಹುತವೇ ನಡೆಯುತ್ತಿತು ಎಂಬುದಾಗಿ ಜನ ಆತಂಕ ವ್ಯಕ್ತ ಪಡಿಸಿದ್ದಾರೆ.
Padubidri: A gaint banyan tree fall to road in midnight near Payuru of Belapu Gram Panchayath, Padubidri. Bike rider escape luckily in accident.