Mangalore and Udupi news
ದೇಶ- ವಿದೇಶಪ್ರಸ್ತುತರಾಜಕೀಯ

ನಿರ್ಮಲಾ ಸೀತರಾಮನ್​ರಿಂದ ಸತತ 8ನೇ ಬಜೆಟ್​ ಮಂಡನೆ – ಸೀತಾರಾಮನ್‌ರ ಲೆಕ್ಕದತ್ತ ಇಡೀ ದೇಶದ ಚಿತ್ತ

Advertisement

2025ನೇ ಸಾಲಿನ ಕೇಂದ್ರ ಬಜೆಟ್​​ ಮಂಡನೆಗೆ ಕೌಂಟ್​ ಡೌನ್​​ ಶುರುವಾಗಿದೆ. ಮೋದಿ ಸರ್ಕಾರ 3.O ಬಜೆಟ್​ನಲ್ಲಿ ಜನಸಾಮಾನ್ಯರಿಗೆ ಏನೆಲ್ಲಾ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ನಿರ್ಮಲಾ ಸೀತರಾಮನ್​​​​​ ಲೆಕ್ಕದ ಮೇಲೆ ಇಡಿ ದೇಶದ ಚಿತ್ತ ನೆಟ್ಟಿದೆ.

ಬಜೆಟ್​​.. ಒಂದು ನಿರ್ದಿಷ್ಟ ಅವಧಿಯ ಹಣಕಾಸು ಯೋಜನೆ. 2025-26ನೇ ಸಾಲಿನ ಕೇಂದ್ರ ಬಜೆಟ್​​ಗೆ ಕ್ಷಣಗಣನೆ ಶುರುವಾಗಿದೆ. ಇವತ್ತು ಪ್ರಧಾನಿ ಮೋದಿ ನೇತೃತ್ವದ 3.O ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಯಾಗಲಿದೆ.

ಇಡೀ ದೇಶದ ಕಣ್ಣು ಇವತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿರುವ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಬೆಳಗ್ಗೆ 11 ಗಂಟೆ ನಂತರ ಸಂಸತ್​​ನಲ್ಲಿ ಬಜೆಟ್​​ ಮಂಡನೆಯಾಗಲಿದ್ದು, ನಿರೀಕ್ಷೆಗಳ ಭಾರ ಹೆಚ್ಚಿದೆ. ಬಜೆಟ್​​ನಲ್ಲಿ ಸರ್ಕಾರ ಜನಸಾಮಾನ್ಯರಿಗೆ ಏನೆಲ್ಲಾ ಗಿಫ್ಟ್​​ಗಳನ್ನ ನೀಡಲಿದೆ ಅನ್ನೋ ಕೌತುಕ ಮನೆ ಮಾಡಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಶ್ರೇಯ ಪಡೆಯಲು ಬಯಸಿರುವ ಕೇಂದ್ರ ಸರ್ಕಾರ, ಜನಸ್ನೇಹಿ ಬಜೆಟ್​ಗೆ ಒತ್ತು ನೀಡುವ ಸಾಧ್ಯತೆ ಇದೆ.

Image

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಅವರು ಸತತ 8ನೇ ಬಾರಿಗೆ ಕೇಂದ್ರ ಬಜೆಟ್​​ನ್ನ ಇವತ್ತು ಮಂಡಿಸಲಿದ್ದಾರೆ. ಅಮೆರಿಕ ಡಾಲರ್​​ ಎದುರು ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ ಹೀಗೆ ಪ್ರಮುಖ ಸವಾಲುಗಳನ್ನ ಎದುರಿಸುವ ನಿಟ್ಟಿನಲ್ಲಿ ಇಂದಿನ ಬಜೆಟ್​ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

  • ಈ ಬಾರಿಯ ಬಜೆಟ್ ಗಾತ್ರ 50 ಲಕ್ಷ ಕೋಟಿಗೆ ತಲುಪೋ ಸಾಧ್ಯತೆ
  • ಇಂದಿನ ಬಜೆಟ್​ನಲ್ಲಿ ದೇಶದ ಮಧ್ಯಮ ವರ್ಗಕ್ಕೆ ರಿಲೀಫ್ ನಿರೀಕ್ಷೆ
  • ವಾರ್ಷಿಕ ₹15 ಲಕ್ಷ ವರೆಗೆ ಸಂಬಳಗಳಿಸುವ ವರ್ಗಕ್ಕೆ ಐಟಿ ರಿಲೀಫ್
  • ಮೂಲಸೌಕರ್ಯಕ್ಕೆ ಒತ್ತು, ಬಂಡವಾಳ ವೆಚ್ಚದ ಮೊತ್ತ ಏರಿಕೆ
  • ಕೃಷಿ, ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ನೀತಿಗಳ ಘೋಷಣೆ?
  • ಉದ್ಯೋಗ ಸೃಷ್ಟಿಸುವ ಎಂಎಸ್ಎಂಇ ಹೆಚ್ಚಿನ ಹಣಕಾಸು ನೆರವು
  • ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇಂಡಸ್ಟ್ರಿ ಸ್ಥಾನಮಾನ ನೀಡಿಕೆ ಬೇಡಿಕೆ
  • ಗೃಹ ಸಾಲದ ಬಡ್ಡಿಯ ತೆರಿಗೆ ವಿನಾಯಿತಿ ಮಿತಿ 2 ಲಕ್ಷ-5 ಲಕ್ಷಕ್ಕೆ ಏರಿಕೆ
  • ರೈಲ್ವೆ ಆಧುನೀಕರಣ, ಮೆಟ್ರೋ ಯೋಜನೆಗಳಿಗೆ ಹೆಚ್ಚಿನ ಹಣ
  • ಹಣದುಬ್ಬರ ನಿಯಂತ್ರಣಕ್ಕೆ ಕೆಲ ಕ್ರಮ ಕೈಗೊಳ್ಳುವ ಅನಿವಾರ್ಯತೆ

Related posts

Leave a Comment