Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಜಾಗದ ತಕರಾರು: ಪಕ್ಕದ ಮನೆಯವನನ್ನು ಕಡಿದು ಹತ್ಯೆ.!!

ಪುತ್ತೂರು : ಜಾಗದ ವಿಚಾರಕ್ಕೆ ವ್ಯಕ್ತಿಯೊಬ್ಬ ನೆರಮನೆಯವನನ್ನು ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಬಳಿಯ ಗೋಳಿತೊಟ್ಟಿನಲ್ಲಿ ನ.08 ಶುಕ್ರವಾರ ರಾತ್ರಿ ನಡೆದಿದೆ.

ಕೊಲೆಯಾದವರನ್ನು ಗೋಳಿತ್ತೊಟ್ಟು ಗ್ರಾಮದ ಆಲಂತಾಯ ನಿವಾಸಿ ರಮೇಶ್ ಗೌಡ (51) ಎಂದು ಗುರುತಿಸಲಾಗಿದೆ.

ಸಂಬಂಧಿಕನೂ ಆಗಿರುವ ನೆರೆಮನೆ ನಿವಾಸಿ ಹರೀಶ್ ಎಂಬಾತ ತಡೆದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ಪೇಟೆಗೆ ಬಂದು ತನ್ನ ಬೈಕಿನಲ್ಲಿ ಮನೆಯತ್ತ ಹಿಂತಿರುಗುತ್ತಿದ್ದ ವೇಳೆ ತಡೆದು ಕೊಲೆ ಮಾಡಲಾಗಿದೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ರಮೇಶ್ ಗೌಡ ಕೊಲೆಯಾಗಿ ಬಿದ್ದಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳದಲ್ಲಿದ್ದು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಉಪ್ಪಿನಂಗಡಿ: ಕತ್ತಿಯಿಂದ ಕಡಿದು ಕೃಷಿಕನ ಕೊಲೆ

Related posts

Leave a Comment