ಮುಡಿಪು: 4 ವರ್ಷಗಳ ಹಿಂದೆ ಭಿಕ್ಷಾಟನೆ ಪ್ರಕರಣದಲ್ಲಿ ಮುಡಿಪಿನಲ್ಲಿರುವ ಪ್ರಜ್ಞಾ ಸ್ವಾಧಾರ ಕೇಂದ್ರ ಸಂಸ್ಥೆಗೆ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಜುಲೇಖಾ ಖಾಟೂನ್ (22 ವರ್ಷ) ಎಂಬಾಕೆ ನಾಪತ್ತೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಇಲ್ಲಿಯವರೆಗೆ ಜುಲೇಖಾ ಅವರ ಮನೆಯವರು ಪತ್ತೆಯಾಗದೇ ಇರುವುದರಿಂದ ಮೇಲಾಧಿಕಾರಿಗಳ ಆದೇಶದಂತೆ 2024 ನೇ ಮಾರ್ಚ ತಿಂಗಳಲ್ಲಿ ಭೂಮಿ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ಆಕೆ ಹೊಂದಿಕೊಳ್ಳಲು ಆಗದೇ ಇರುವುದರಿಂದ ಏಪ್ರೀಲ್ 18 ನೇ ತಾರೀಖು ಕಾಣೆಯಾಗಿದ್ದು ಬಳಿಕ ಆಕೆಯನ್ನು ಮಂಗಳೂರು ಸೇಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮುಡಿಪು ಪ್ರಜ್ಞಾ ಸ್ವಾದರ ಗೃಹದಲ್ಲಿ ಇದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಇರುತ್ತಾಳೆ.
ಸದ್ರಿ ಕೇಂದ್ರದಲ್ಲಿರುವ 4 ಮಕ್ಕಳನ್ನು ಕುರ್ನಾಡು ಅಂಗನವಾಡಿಗೆ ಬಿಟ್ಟು ಕರೆದುಕೊಂಡು ಬರಲು ಆಕೆಯೇ ಹೋಗಿ ಬರುತ್ತಿದ್ದು, ಎಂದಿನಂತೆ ಈ ದಿನ ದಿನಾಂಕ 19.09.2024 ರಂದು ಮಧ್ಯಾಹ್ನ 2.45 ಗಂಟೆಗೆ ಮಕ್ಕಳನ್ನು ಕರೆದುಕೊಂಡು ಬರಲು ಅಂಗನವಾಡಿಗೆ ಹೋದವಳು ಸುಮಾರು ½ ಗಂಟೆಯಾದರೂ ವಾಪಸು ಬಾರದೇ ಇದ್ದುದರಿಂದ ಅಂಗನವಾಡಿ ಟೀಚರ್ ನಲ್ಲಿ ವಿಚಾರಿಸಲಾಗಿ ಮಕ್ಕಳು ಅಂಗನವಾಡಿಯಲ್ಲಿಯೇ ಇದ್ದು ಕರೆದುಕೊಂಡು ಹೋಗಲು ಜುಲೇಖಾ ಕಾಟೂನ್ ಬಂದಿರುವುದಿಲ್ಲವಾಗಿ ಹೇಳಿರುತ್ತಾರೆ .
ಬಳಿಕ ಸದ್ರಿ ಸಂಸ್ಥೆಯ ಆಪ್ತ ಸಮಾಲೋಚಕಿಯವರ ಜೊತೆ ಸಂಸ್ಥೆಯ ಸುತ್ತಮುತ್ತ ಮತ್ತು ಮುಡಿಪು ಜಂಕ್ಷನ್ ಕಡೆಗಳಲ್ಲಿ ಹುಡುಕಾಡಿದ್ದು ಈ ತನಕ ಪತ್ತೆಯಾಗದೇ ಇರುವುದರಿಂದ ದೂರು ನೀಡಲಾಗಿದೆ. ಗುರುತು ಪತ್ತೆಯಾದಲ್ಲಿ ಪೊಲೀಸರಿಗೆ ತಿಳಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.