Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

MRPL -ONGC ಕರ್ಮಚಾರಿ ಸಂಘದ ಮಹಾಸಭೆ

ಸುರತ್ಕಲ್ :  ಎಂ ಆರ್ ಪಿ ಎಲ್ ನಲ್ಲಿ ಕೂಲಿ ಕಾರ್ಮಿಕರ ಅನೇಕ ಸಮಸ್ಯೆಗಳಿದ್ದು ಅದನ್ನು ಪರಿಹರಿಸಲು ಆಗ್ರಹಿಸಲಾಯಿತು ಮತ್ತು ಎಂ ಆರ್ ಪಿ ಎಲ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಮಾಸಿಕ 21,000 ವೇತನ ಪಡೆಯುತ್ತಿರುವ ಕಾರ್ಮಿಕರಿಗೆ ಇಎಸ್ ಐ ವ್ಯವಸ್ಥೆ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಸಂಸ್ಥೆಗೆ ಮನವಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಸಂಸ್ಥೆಯಿಂದ ನಿವೃತ್ತಿ ಹೊಂದುವ ಸಂದರ್ಭದಲ್ಲಿ ಸಂಸ್ಥೆಯು ಯಾವ ರೀತಿಯ ಸಹಕಾರ ನೀಡುತ್ತಿಲ್ಲ ಆದ ಕಾರಣದಿಂದ ಕರ್ಮಚಾರಿ ಸಂಘದ ವತಿಯಿಂದ ಡಿಸೇಂಬರ್ ತಿಂಗಳಿಂದ ನೀಡುವ ವೃದ್ದಾಪ್ಯ ನಿಧಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಮಚಾರಿ ಸಂಘದ ಅಧ್ಯಕ್ಷ ನಿತಿನ್ ಬಿಸಿರೋಡ್ ವಹಿಸಿದ್ದರು. ವೇದಿಕೆಯಲ್ಲಿ ಎಂ ಆರ್ ಪಿ ಎಲ್ ಎಂಪ್ಲಾಯಿಸ್ ಯೂನಿಯನ್ ಉಪಾಧ್ಯಕ್ಷ ಯುವರಾಜ್, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಕಾರಂತ್, ಕೋಶಾಧಿಕಾರಿ ಗುರುರಾಜ್ ಭಟ್, ಕರ್ಮಚಾರಿ ಸಂಘದ ಉಪಾಧ್ಯಕ್ಷ ಪ್ರಸಾದ್ ಅಂಚನ್, ಸುರೇಶ ಪೊಸ್ರಾಲ್,ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜತೆ ಕಾರ್ಯದರ್ಶಿ ಸುನಿಲ್ ಬೋಳ, ಸುರೇಶ ಪೂಜಾರಿ ಕೋಶಾಧಿಕಾರಿ ಪುರುಷೋತ್ತಮ್, ಎಸ್ ಸಿ ಎಸ್ ಟಿ ವಿಭಾಗದ ಅಧ್ಯಕ್ಷ ಸಂತೋಷ್ ಮುಂಡ್ಕುರ್, ಮಾಜಿ ಅಧ್ಯಕ್ಷ ಪ್ರವೀಣ್ ಕೃಷ್ಣಾಪುರ ಉಪಸ್ಥಿತರಿದ್ದರು.

There are many issues of wage labor in MRPL which were demanded to be solved and there is no ESI system for 21,000 monthly salaried workers working in MRPL. He has appealed to the people's representatives and the organization in this regard.

Related posts

Leave a Comment