ಸುರತ್ಕಲ್: MRPL -ONGC ಕರ್ಮಚಾರಿ ಸಂಘದ ವತಿಯಿಂದ ದಿನಾಂಕ 2-10-2024ರಂದು ಬಾಳ ಸಮುದಾಯ ಭವನದಲ್ಲಿ MRPL ನಲ್ಲಿ ದುಡಿಯುತ್ತಿರುವ ಕರ್ಮಚಾರಿ ಸಂಘದ ಸದಸ್ಯರ ಮಹಾಸಭೆಯನ್ನು ಕರೆಯಲಾಗಿದೆ.
ಈ ಬಗ್ಗೆ ಕರ್ಮಚಾರಿ ಸಂಘದ ಅಧ್ಯಕ್ಷರಾದ ಶ್ರೀ ನಿತಿನ್ H.U ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ತ್ರೈವಾರ್ಶಿಕ ಲೆಕ್ಕ ಪತ್ರ ಮಂಡನೆ ಹಾಗೂ ಡಿಸೆಂಬರ್ 1ರಿಂದ ನಿವೃತ್ತಿ ಹೊಂದಲಿರುವ ಕಾರ್ಮಿಕರಿಗೆ ಕರ್ಮಚಾರಿ ಸಂಘದ ಸದಸ್ಯರಿಗೆ “ವೃದ್ಯಾಪ ನಿಧಿ” ಬೈಲಾ ತಿದ್ದುಪಡಿಸುವ ಬಗ್ಗೆ ಮಹತ್ತರ ನಿರ್ಣಯ ಕೈಗೊಳ್ಳಲಿದ್ದಾರೆ. ಸುಮಾರು 1500ಕೂ ಅಧಿಕ ಕಾರ್ಮಿಕ ಸದಸ್ಯರು ಭಾಗವಹಿಸಲಿದ್ದಾರೆ.