ಮಂಗಳೂರು: ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಕೆ.ಎನ್.ಡಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾದ ಘಟನೆ ನಡೆದಿದ್ದು, ಇವರ ಪತ್ತೆಗಾಗಿ ಮಗ ದೂರು ದಾಖಲಿಸಿದ್ದಾರೆ.
ರೋಶನ್ ಎಂಬವರ ತಂದೆ ತುಕಾರಾಮ್ ಖಾರ್ವಿ ಎಂಬವರು ನಾಪತ್ತೆಯಾದವರು. ಇವರು ಕಳೆದ 16 ವರ್ಷಗಳಿಂದ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಕೆ.ಎನ್.ಡಿಯಾಗಿ ಕೆಲಸ ಮಾಡಿಕೊಂಡಿದ್ದಾರೆ.
ದಿನಾAಕ 13-11-2024 ರಂದು ಸಮಯ ಬೆಳಗ್ಗೆ 7.30 ಗಂಟೆಗೆ ಎಂದಿನAತೆ ಕರ್ತವ್ಯಕ್ಕೆಂದು ಮನೆಯಿಂದ ಹೊರಟ ತುಕಾರಾಮ್ ಖಾರ್ವಿ ದಿನಾಂಕ 17.11.2024 ರ ಬೆಳಗಿನವರೆಗೂ ಮನೆಗೆ ಮರಳಿ ಬಂದಿರುವುದಿಲ್ಲ. ಬೆಳಗ್ಗೆ ಅವರು ಕೆಲಸ ಮಾಡುತ್ತಿದ್ದ ಸಿ,ಎಸ್ ಪಿ ಪೊಲೀಸ್ ಠಾಣೆಗೆ ಹೋಗಿ ಕೇಳಿದಾಗ ತುಕಾರಾಮ್ ಖಾರ್ವಿಯವರು ದಿನಾಂಕ 13-11-2024 ರಿಂದ ಕರ್ತವ್ಯಕ್ಕೆ ಬಂದಿರುವುದಿಲ್ಲವೆ0ದು ತಿಳಿದುಬಂದಿದೆ.
ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿರುವ ತುಕಾರಾಮ್ ಖಾರ್ವಿರವರು ಕೆಲಸಕ್ಕೂ ಹೋಗದೆ, ಮರಳಿ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ. ತುಕಾರಾಮ್ ಖಾರ್ವಿರವರು ಇದಕ್ಕೂ ಮೊದಲು ಒಂದೆರಡು ಬಾರಿ ಮನೆಯಲ್ಲಿ ಹೇಳದೇ ದೂರದ ದೇವಸ್ಥಾನಗಳಿಗೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಹಾಗೆ ಎಂದು ತಾವು ಭಾವಿಸಿದ್ದು, ಇನ್ನೂ ಬರದೇ ಇರುವುದರಿಂದ ದೂರು ದಾಖಲಿಸಿದ್ದಾರೆ.
ಕಾಣೆಯಾದವರ ಚಹರೆ ವಿವರ:
ಹೆಸರು: ತುಕಾರಾಮ ಖಾರ್ವಿ, 52 ವರ್ಷ ಪ್ರಾಯ
ಎತ್ತರ: ಸುಮಾರು 5.6 ಅಡಿ, ಎಣ್ಣೆ ಕಪ್ಪು ಮೈ ಬಣ್ಣ
ಭಾಷೆ: ಕೊಂಕಣಿ, ತುಳು, ಕನ್ನಡ ಮಾತಾಡಬಲ್ಲರು.
ಬಟ್ಟೆ ಬರೆಗಳು: ಸಮವಸ್ತ್ರವಾದ ಕೆಂಪು ಬಣ್ಣದ ಅರ್ಧ ತೋಳಿನ ಟಿ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.