Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುಣಚದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ಅಧಿಕಾರಿಗಳ ದಾಳಿ – ಮೆಷನ್ ಗಳು ವಶಕ್ಕೆ.!!

ಬಂಟ್ವಾಳ : ಪುಣಚ ಗ್ರಾಮದಲ್ಲಿರುವ ಮೂಡಂಬೈಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೊರೆ ನಡೆಸುತ್ತಿದ್ದ ಜಾಗಕ್ಕೆ ಗಣಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಡಿ.06ರ ಸಂಜೆ ನಡೆದಿದೆ.

ಸರಕಾರಿ ಜಾಗದಲ್ಲಿ ಮನಸೋಯಿಚ್ಛೆ ಕಲ್ಲು ತೆಗೆದು ಸಾಗಾಟ ಮಾಡುತ್ತಿದ್ದ ವಿಚಾರವನ್ನು ದಕ್ಷ ನ್ಯೂಸ್  ಹಾಗೂ ತುಳುನಾಡ ವಾರ್ತೆ ವರದಿ ಬಿತ್ತರಿಸಿತ್ತು. ಈ ವಿಚಾರ ಬಂಟ್ವಾಳ ಗಣಿ ಇಲಾಖೆಯ ಗಮನಕ್ಕೆ ಬಂದು ತಕ್ಷಣ ಎಚ್ಚೇತ್ತ ಅಧಿಕಾರಿಗಳ ದಕ್ಷ ಕಾರ್ಯಚರಣೆ ಮೂಲಕ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಸರಕಾರಿ ಜಾಗವನ್ನು ತಮ್ಮ ಸ್ವಂತ ಜಾಗದಂತೆ ಬೇಕಾದ ಎಲ್ಲಾ ಮಿಷನ್ ಗಳನ್ನ ಇಳಿಸಿ ಮನಸೋಯಿಚ್ಛೆ ಕೊರೆ ನಡೆಸುತ್ತಿದ್ದರು. ಕಾರ್ತಿಕ್ ರೈ ಹಾಗೂ ಜಯರಾಮ ರೈ ಎನ್ನುವವರು ಇತಂಹ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ ಗಣಿ ಅಧಿಕಾರಿಗಳು ಸ್ಥಳದಲ್ಲಿದ್ದ ಮೆಷನ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸರಕಾರಿ ಜಾಗದಲ್ಲಿ ಈ ರೀತಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು ದುರಂತ ನೋಡಿ, ಪ್ರಕೃತಿ ರಕ್ಷಣೆಯ ಬದಲು ಅದೇ ಊರಿನ ಪ್ರಭಾವಿ ವ್ಯಕ್ತಿಗಳು ಭಕ್ಷಣೆಯ ಕೆಲಸ ಮಾಡುತ್ತಿದ್ದಾರೆ. ಅಕ್ರಮವಾಗಿ ಕೆಂಪುಕಲ್ಲಿನ ಗಣಿಗಾರಿಕೆಯನ್ನು ನಡೆಸಿ ಭಾರೀ ಪರಿಸರ ನಾಶ ಮಾಡುತ್ತಿದ್ದಾರೆ. ಸದ್ಯ ಗಣಿ ಇಲಾಖಾ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ದಾಳಿ ನಡೆಸಿ ಕ್ರಮ ಜರಗಿಸಿರುವುದಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Related posts

1 comment

M P Padasalimani December 8, 2024 at 6:42 am

Good job

Reply

Leave a Comment