
ಮಂಗಳೂರು : ಕರಾವಳಿ ಭಾಗದ ಹೆಮ್ಮೆಯ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ಮಂಜುನಾಥ್ ಮಂಗಳೂರು, ಸಂತೋಷ್ ಪೊಳಲಿ ಹಾಗೂ ಜ್ಯೋತಿಷ್ ಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷ ಪಚ್ಚನಾಡಿಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಯಿತು.
ಹಿಂದೂ ಧರ್ಮ ಜಾಗೃತಿ, ರಕ್ಷಣೆಯ ಜವಾಬ್ಧಾರಿಯನ್ನು ಮುಂದಿನ ಪೀಳಿಗೆಗೆ ತೋರಿಸಿ ಅವರ ಆದರ್ಶದ ಜೀವನಕ್ಕೆ ಚುಕ್ಕಿ ಇಟ್ಟು ವರುಷ ಹದಿನಾರು ಸಂದರು, ಆ ಆದರ್ಶದ ಹಿಂದೂ ಕಣ್ಮಣಿ ಮಂಜುನಾಥ್ ಮಂಗಳೂರು ಅವರ ಸವಿ ನೆನಪಿಗಾಗಿ ಹುಟ್ಟಿಕೊಂಡ0ತಹ ಸಂಸ್ಥೆಯೇ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು. ಹಿಂದುತ್ವವೆAಬ ಗರಡಿಯ ಧರ್ಮ ಯಜ್ಞದಲ್ಲಿ ಜಿಹಾದಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಹಿಂದೂ ಸೇನಾನಿ ತನ್ನನ್ನು ತಾನು ಭಾರತ ಮಾತೆಗೆ ಸಮರ್ಪಿಸಿಕೊಂಡ ಹಿಂದೂ ಯುವ ಕಣ್ಮಣಿ ಸಂತೋಷ್ ಪೊಳಲಿ ಹಾಗೂ ಕೇರಳದ ಧರ್ಮ ಸೇವೆಯಲ್ಲಿ ಸದಾ ನಿರತರಾಗಿ ಅದೆಷ್ಟೋ ಯುವಕರ ಪಾಲಿನ ಆದರ್ಶ ವ್ಯಕ್ತಿಯಾದ ಜ್ಯೋತಿಷ್ ಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಗಣ್ಯರ ಸಮ್ಮಖದಲ್ಲಿ ಫೆ.19ರಂದು ಪಚ್ಚನಾಡಿಯ ವೃದ್ಧಾಶ್ರಮದಲ್ಲಿ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.
ಸುಮಾರು 200ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ 70ಲಕ್ಷಕ್ಕೂ ಅಧಿಕ ಮೊತ್ತದ ಸೇವಾ ಯೋಜನೆಯನ್ನು ಮಾಡಿರುವ ಮಂಜಣ್ಣ ಸೇವಾ ಬ್ರಿಗೇಡ್, ಸದ್ಯ ಬಡಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯದಲ್ಲೂ ತೊಡಗಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವು ಬಲಿದಾನಗೈದ ಮೂವರು ಅಮೂಲ್ಯವಾದ ಹಿಂದೂ ಕ್ರಾಂತಿಕಾರಿಗಳನ್ನು, ಹಿಂದೂ ಸಮಾಜದ ಅನಭಿಶಕ್ತ ದೊರೆಗಳನ್ನು ಸ್ಮರಿಸುವ ಕಾರ್ಯ ನಡೆಸಿಕೊಂಡು ಬಂದಿದೆ.
ಹಿಂದೂ ಬಲಿದಾನಿಗಳಿಗೆ ದೀಪವನ್ನು ಬೆಳಗಿಸಿ ಪುಷ್ಪನಮನ ಮಾಡಲಾಯಿತು. ಬಳಿಕ ವೃದ್ಧಾಶ್ರಮದಲ್ಲಿ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ನಾಗೇಶ್ ಪೂಜಾರಿ ಗೆಳೆಯರ ಬಳಗ ದ ಸ್ಥಾಪಕ ಅಧ್ಯಕ್ಷರು, ಸಂದೀಪ್ ಶೆಟ್ಟಿ ಆಮ್ಲಮೊಗರು, ದೀಪಕ್ ಶೆಟ್ಟಿ ಪಡೀಲ್, ವರದರಾಜ್ ವಾಮಂಜೂರು, ಬ್ರಿಜೇಶ್ ಶೆಟ್ಟಿ, ಹಾಗೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶೋಕ್ ಶೆಟ್ಟಿ ವ್ಯವಸ್ಥಾಪಕರು ನಿರಾಶ್ರಿತರ ಪರಿಹಾರ ಕೇಂದ್ರ ಪಚ್ಚನಾಡಿ ಇವರು ಸ್ವಾಗತ ಮಾಡಿದರು, ದೀಕ್ಷಿತ್ ಶೆಟ್ಟಿ ತೋಕೂರು ನಿರೂಪಣೆ ಮಾಡಿದರು.