Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಜ್ಯೂಸ್‌ನಲ್ಲಿ ಔಷಧ ಬೆರೆಸಿ ಅತ್ಯಾಚಾರ – ಆರೋಪಿ ಶಫೀನ್ ಬಂಧನಕ್ಕೆ ಲುಕ್‌ಔಟ್ ನೋಟೀಸ್.!!

ಮಂಗಳೂರು: ಯುವತಿಯೊಬ್ಬಳಿಗೆ ಸಹಾಯದ ನೆಪದಲ್ಲಿ ಮನೆಗೆ ಬಂದವ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ನಡೆಸಿ ಬೆದರಿಕೆ ಹಾಕಿದ್ದು, ಮುಸ್ಲಿಂ ಯುವಕ ಶಫೀನ್ ಬಂಧನಕ್ಕೆ ಆತನ ವಿರುದ್ಧ ಲುಕ್‌ಔಟ್ ನೋಟೀಸು ಜಾರಿ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಮಂಗಳುರು ಕಮೀಷನರೆಟ್ ವ್ಯಾಪ್ತಿಯ 28ರ ಹರೆಯದ ಹುಡುಗಿ ನೀಡಿದ ದೂರಿನಂತೆ ನ 26ರಂದು ಮಂಗಳೂರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣದಲ್ಲಿ ಅರೋಪಿಯ ಸಹೋದರ ಮೊಹಮ್ಮದ್ ಸಿಯಾಬ್ ಎರಡನೇ ಆರೋಪಿಯಾಗಿದ್ದಾನೆ.

ಜು. 21ರಂದು ನಗರದ ಕದ್ರಿ ಬಳಿ ಸಂತ್ರಸ್ಥೆಯ ಕಾರು ಕೆಟ್ಟು ಹೋದ ಸಂದರ್ಭ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಎಂಬಾತ ಕಾರನ್ನು ಸರಿಪಡಿಸಿ, ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ ಬೈಲಿನಲ್ಲಿರುವ ಅಪಾರ್ಟ್ಮೆಂಟ್ ಗೆ ಬಿಟ್ಟು ಬಂದಿದ್ದ. ಈ ವೇಳೆ ಆತ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಆ. 8ರಂದು ಯುವತಿಯ ಮನೆ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಸಹಾಯಕ್ಕಾಗಿ ಶಫಿನ್‌ಗೆ ಕರೆ ಮಾಡಿದ್ದಾಳೆ. ಆತ ತನ್ನ ಪರಿಚಿತ ರಿಪೇರಿಯವನನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿ ಬಳಿಕ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಜ್ಯೂಸ್ ಕುಡಿದ ಯುವತಿ ನಿದ್ದೆಗೆ ಜಾರಿದ್ದು, ಎಚ್ಚರಗೊಂಡಾಗ ಅತ್ಯಾಚಾರ ನಡೆದಿರುವ ವಿಚಾರ ತಿಳಿದಿದೆ.

ವಿಚಾರಿಸಿದಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ಜತೆಗೆ ಮುಂದೆಯೂ ಸಹಕರಿಸಬೇಕು. ಇಲ್ಲದಿದ್ದರೆ ಈಗಾಗಲೇ ಮಾಡಿರುವ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿ ಯುವತಿಯ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ.

ಕಾರನ್ನು ಹುಡಕಿಕೊಂಡು ಯುವತಿ ದೇರಳಕಟ್ಟೆಯ ಆರೋಪಿಯ ಮನೆಗೆ ಹೋಗಿದ್ದು, ಈ ವೇಳೆ ಆ ಮನೆಯಲ್ಲಿದ್ದ ಮಹಮ್ಮದ್ ಶಫಿನ್ನ ಸಹೋದರನು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದು. ಯುವತಿ ತಪ್ಪಿಸಿಕೊಂಡಿದ್ದಾಳೆ. ಮರು ದಿನ ಯುವತಿಯ ಮನೆಗೆ ಬಂದ, ಮೊಹಮ್ಮದ್ ಶಫೀನ್ ಯುವತಿಯ ಮನೆಲ್ಲಿದ್ದ 62 ಸಾವಿರ ರೂಪಾಯಿ ಕದ್ದಿದ್ದಾನೆ. ಸದ್ಯ ಆರೋಪಿ ಶಫೀನ್ ವಿದೇಶಕ್ಕೆ ಪರಾರಿಯಾಗಿರುವುದಾಗಿ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಆರೋಪಿಯ ವಿರುದ್ದ ಮಂಗಳೂರು ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನೂ ಯುವತಿ ತಡವಾಗಿ ದೂರು ನೀಡಿದ್ದಾರೆ ಎನ್ನುವುದು ಯಾವುದೇ ಸಮಸ್ಯೆ ಆಗುವುದಿಲ್ಲ. ನೊಂದ ಮಹಿಳೆ ಯಾವಾಗ ಬೇಕಾದರೂ ದೂರು ನೀಡಬಹುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಕಮೀಷನರ್ ತಿಳಿಸಿದರು. ಸದ್ಯ ಆರೋಪಿಯ ಪತ್ತೆಗಾಗಿ ಲುಕ್‌ಔಟ್ ನೋಟೀಸು ಜಾರಿ ಮಾಡಲಾಗಿದೆ.

Related posts

Leave a Comment