ಮಂಗಳೂರು: ಅಕ್ರಮವಾಗಿ ವಿವಿಧ ಬ್ರಾಂಡ್ ಗಳ ಮದ್ಯ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ವ್ಯಕ್ತಿಯನ್ನು ಶ್ಯಾಮ್ ಸುಂದರ್ ಬಿನ್ ಬಿ ವಿ ಕೃಷ್ಣನ್ ನಂಬಿಯಾರ್ ಎಂದು ಗುರುತಿಸಲಾಗಿದೆ.
17-11-2024 ರಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲೆನ್ಸಿಯದಲ್ಲಿರುವ ರೋಶನಿ ನಿಲಯದ ಪ್ರದೇಶದ ವಿಕ್ಟೋರಿಯಾ ಅಪಾರ್ಟೆಂಟ್ ಮುಂಭಾಗದ ರಸ್ತೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ವಿರುದ್ಧವಾಗಿ ವಿವಿಧ ಬ್ರಾಂಡಿನ ಡಿಫೆನ್ಸ್ ಲಿಕ್ಕರ್ ಮದ್ಯ- ಸುಮಾರು 11.50ಲೀಟರ್ ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಶ್ಯಾಮ್ ಸುಂದರ್ ಬಿನ್ ಬಿ ವಿ ಕೃಷ್ಣನ್ ಎಂಬಾತ ಅಬಕಾರಿ ಇಲಾಖಾ ಸಿಬ್ಬಂದಿಗಳ ಬಲೆಗೆ ಬಿದ್ದಿದ್ದಾನೆ.
ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 11,14, 15 ರಂತೆ ಅಪರಾಧವಾಗಿದ್ದು, ಕಲಂ 32(1) ಮತ್ತು 38(ಎ) ರಂತೆ ಶಿಕ್ಷಾರ್ಹವಾಗಿರುವುದರಿಂದ ಈ ಬಗ್ಗೆ ಘೋರ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಪ್ರಕರಣದಲ್ಲಿ ಶ್ಯಾಮ್ ಸುಂದರ್ ಬಿನ್ ಬಿ ವಿ ಕೃಷ್ಣನ್ ನಂಬಿಯಾರ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.