Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುತ್ತೂರು: ಹಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ ಅವರಿಗೆ ಕರ್ನಾಟಕ ಜಾನಪದ ಪ್ರಶಸ್ತಿ

ಪುತ್ತೂರು : ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯ, ದೇಯಿಬೈದೇತಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲು ನಿವಾಸಿ ನಾಟಿವೈದ್ಯೆ ಲೀಲಾವತಿ ಬೈದೇತಿ (77) ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಡುಮಲೆಯಲ್ಲಿನ ಪ್ರತಿ ಮರ-ಗಿಡ-ಬಳ್ಳಿಗಳಲ್ಲಿ ಸಂಜೀವಿನಿಯಂತಹ ಔಷಧೀಯ ದೃವ್ಯಗುಣಗಳಿವೆ ಎಂಬ ನಂಬಿಕೆ ಇದೆ. ಈ ಪರಿಸರದ ಲೀಲಾವತಿ ನಾಟಿ ವೈದ್ಯರಾಗಿ ಚಿರಪರಿಚಿತರು.

ಸಾವಿರಾರು ಮಂದಿಯ ಬದುಕಿನಲ್ಲಿ ಅಶಾ ಕಿರಣ ಮೂಡಿಸಿರುವುದರೊಂದಿಗೆ ನಾಟಿ ವೈದ್ಯವನ್ನು ಸೇವಾ ಯಜ್ಞದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ಸರ್ಪಸುತ್ತು, ಕೆಂಪು, ದೃಷ್ಟಿ, ಬೆಸುರುಪು, ಸೊರಿಯಾಸಿಸ್-ಚರ್ಮ ರೋಗವನ್ನೂ ಪರಿಹರಿಸುವ ಚಿಕಿತ್ಸೆ ನೀಡುವಲ್ಲಿ ಪ್ರಖ್ಯಾತರು.

ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ದಾಳಿ : ಅರುಣ್  ಕುಮಾರ್ ಪುತ್ತಿಲ ಖಂಡನೆ – Zoomin Tv

ಮಕ್ಕಳ ಚಿಕಿತ್ಸೆ, ಸಂಧಿವಾತ, ನೋವಿನ ತೈಲ ಅಲ್ಲದೆ ಇವರು ತಯಾರಿಸಿ ಕೊಡುವ ದೇಸೀ ಔಷಧಗಳಿಗೆ ಮತ್ತು ಕೇಶಕಾಂತಿ ತೈಲ, ದೇಯಿ-ಬೈದೈತಿ ತೈಲಕ್ಕೆ ಹಲವಾರು ರಾಜ್ಯದಿಂದ ಬೇಡಿಕೆಗಳಿವೆ.

2016 ರಲ್ಲಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಮಹಿಳಾ ಸಮಾಗಮ ಸಂದರ್ಭದಲಿ ಸಮ್ಮಾನ ಪುರಸ್ಕಾರ ಸಂದಿದೆ. ಕೋಟಿ-ಚೆನ್ನಯ, ದೇಯಿ ಬೈದೇತಿ ಮೂಲಸ್ಥಾನ ಗೆಜ್ಜೆಗಿರಿಯಯ ನಂದನಬಿತ್ತಿಲಿನಲ್ಲಿ ನಾಟಿ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಕುಟುಂಬದ ಹೆಸರಿನಲ್ಲಿ ‘ವೈದ್ಯೆ’ ಎನ್ನುವ ವಿಶೇಷಣವನ್ನು ಪಡುಮಲೆಯ ಬಲ್ಲಾಳರಿಂದ ಪಡೆದ ಸಾರ್ಥಕತೆಯ ಗೌರವ. ದೇಯಿಬೈದ್ಯೆದಿ ಬಳಸುವ ಮದ್ದಿನಗಿಂಡಿಯಲ್ಲಿ ಔಷಧ ನೀಡುವ ಇಂದಿಗೂ ಸರ್ಪರೊಗಗಳಿಗೆ ಮದ್ದನ್ನು ಮಾಡುವ ಇವರ ಕೈಗುಣದ ಬಗ್ಗೆ ಜನರಿಗೆ ಅಪಾರ ಭಕ್ತಿ, ಶ್ರದ್ಧೆ ಮತು ಗೌರವದ ವಿಶ್ವಾಸ. ಸಾ

ವಿರಾರು ಮಂದಿಯ ಬದುಕಿನ ಸಂಕಟವನ್ನು ದೂರಮಾಡುತ್ತಿರುವ ಸಂಜೀವಿನಿ ಸಸ್ಯಷಧ ಜ್ಞಾನ ಪರಂಪರೆಯಿಂದ ಸಂರಕ್ಷಿಸಿಕೊಂಡು ಬಂದಿರುವ ಇವರ ಮನೆತನ ಮತು ಇವರು ನೀಡುವ ಪ್ರತಿ ಔಷಧಿಯಲ್ಲಿ ಅಮೃತಸಿದ್ಧಿ ನೀಡುವ ದೇಯಿಬೈದ್ಯೆದಿ ಶ್ರೀ ರಕ್ಷೆ – ಆಶೀರ್ವಾದ ಇರಲಿದೆ ಎಂಬುದು ಜನರ ವಿಶ್ವಾಸವಾಗಿದೆ.

Related posts

Leave a Comment