ಮಂಗಳೂರು : ರೌಡಿ ಶೀಟರ್ ಲೋಕಿ ಕೋಡಿಕೆರೆ ಗ್ಯಾಂಗ್ ವ್ಯಕ್ತಿಯೋರ್ವನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಬಿಜೈ ನಿವಾಸಿ ಅರ್ಪಿತ್ ಎನ್ನುವನನ್ನು ಶೈಲೇಶ್ ಬಜಿಲಕೇರಿ ಎಂಬಾತನ ತಂಡ ಮಂಗಳೂರಿನ ಬಿಜೈನ KSRTC ಬಳಿಯಲ್ಲಿ ನಿಂತಿರುವ ಸಂದರ್ಭ ಮಾತನಾಡಲು ಎಂದು ಕರೆದು ಕಪ್ಪು ಬಣ್ಣದ ವೆನ್ವು ಕಾರಿನಲ್ಲಿ ಅಪರಣ ಮಾಡಿದ ತಂಡ ಬಜೀಲಕೇರಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ರೌಡಿ ಶೀಟರ್ ಲೋಕಿ ಕೋಡಿಕೆರೆ ನಿರ್ದೇಶನದದಂತೆ ಕೋಡಿಕೆರೆಯಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದು “ನೀನು ಪ್ರತಿ ತಿಂಗಳು ನನಗೆ ಎರಡು ಲಕ್ಷ ನೀಡಬೇಕು” ಎಂದು ತಲವಾರು ಹಾಗೂ ಮಾರಕ ಆಯುಧಗಳನ್ನು ತೋರಿಸಿ ಕೊಲೆಬೆದರಿಕೆ ನೀಡಿದ ಘಟನೆ ಶನಿವಾರ ರಾತ್ರಿ10 ಗಂಟೆ ವೇಳೆಗೆ ನಡೆದಿದೆ ಎನ್ನಲಾಗಿದೆ.
ಪ್ರತಿ ತಿಂಗಳು ಎರಡು ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಅಪಹರಣಕ್ಕೊಳಗಾದ ವ್ಯಕ್ತಿ ಕರೆ ಮಾಡಿ ತಿಳಿಸಿರುದಾಗಿ ತಿಳಿದುಬಂದಿದೆ.
ಈ ಘಟನೆ ಮಂಗಳೂರ ಹೃದಯ ಭಾಗದಲ್ಲೇ ನಡೆದಿದ್ದು, ಪುಡಿ ರೌಡಿಗಳ ಅಟ್ಟಹಾಸ ಇನ್ನೂ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದು ನಿಜಕ್ಕೂ ಮಂಗಳೂರಿಗೆ ಮಾರಕ. ಇಂತಹ ಘಟನೆ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತು ತಕ್ಷಣ ಕ್ರಮ ಜರಗಿಸುವ ಅಗತ್ಯವಿದೆ.
ಅರ್ಪಿತ್ ಬಿಜೈ ನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಿಂತಿರುವ ಸಂದರ್ಭ ಮಾತನಾಡಲು ಎಂದು ಕರೆಸಿ ಅಪಹರಣ ಮಾಡಿ ಈ ರೀತಿಯಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಆತ ಕೊಲೆ ಬೆದರಿಕೆಯಿಂದ ಪೊಲೀಸ್ ದೂರು ನೀಡಲು ಭಯಪಡುತ್ತಿದ್ದಾನೆ. ಒಬ್ಬನನ್ನು ಹಣಕ್ಕಾಗಿ ಈ ರೀತಿ ಕೊಲೆ ಬೆದರಿಕೆ ಹಾಕುವ ಮನಸ್ಥಿತಿ ಇರುವ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಪೊಲೀಸ್ ಅಧಿಕಾರಿಗಳು ಈ ರೌಡಿಗಳ ಬಗ್ಗೆ ಗಮನ ಹರಿಸಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಅಗತ್ಯತೆ ಇದೆ.