Mangalore and Udupi news
ಅಪರಾಧಕಾಸರಗೋಡುಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತ

ಚರ್ಚ್ ನ ಮೆರವಣಿಯಲ್ಲಿ ನಶೆಯಲ್ಲಿ ಯುವಕರ ಗುಂಪು ಘರ್ಷಣೆ: ಪೊಲೀಸ್ ಜೀಪ್ ಏರಿ ವಿಕೃತಿ.!!

ಕೇರಳ : ಚರ್ಚ್ ನಲ್ಲಿ ನಡೆದ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪೊಲೀಸ್ ಜೀಪಿನ ಮೇಲೆ ಡ್ಯಾನ್ಸ್ ಮಾಡುತ್ತಾ ಯುವಕರು ವಿಕೃತಿ ಮೆರದ ಘಟನೆ , ತ್ರಿಶೂರ್ ಪೆರಮಂಗಲAನಲ್ಲಿ ನಡೆದಿದ್ದು, ನಾಲ್ವರನ್ನು ಬಂಧಿಸಿ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಬಂಧಿತರನ್ನು ಅಭಿತ್ (23), ಧನನ್ (31), ಅಜಿತ್ (24), ಮತ್ತು ಎಡ್ವಿನ್ ಜೋಸ್ (28) ಎಂದು ಗುರುತಿಸಲಾಗಿದೆ. ಪರಮೆಕ್ಕುಳಂ ಪೊಲೀಸರು ಅವರನ್ನು ಬಂಧಿಸಿದ್ದು, ಕುನ್ನಂಕುಲo ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕುಡಿದು ನಶೆಯಲ್ಲಿದ್ದ ಯುವಕರು ಗುಂಪು ಚರ್ಚ್ನಲ್ಲಿ ಹಬ್ಬದ ಮೆರವಣಿಗೆ ವೇಳೆ ಗಲಾಟೆ ಮಾಡುತ್ತಾ ಅಡ್ಡಿ ಉಂಡುಮಾಡಿದ್ದಾರೆ. ಘಟನಾ ಪೊಲೀಸರು ಆಗಮಿಸಿ ಗುಂಪನ್ನು ಚದುರಿಸಿದರು. ಗಲಾಟೆ ನಡುವೆಯೇ ಯುವಕನೊಬ್ಬ ಪೊಲೀಸ್ ಜೀಪಿನ ಮೇಲೆ ಡ್ಯಾನ್ಸ್ ಮಾಡಿದ್ದಾನೆ. ಅಭಿಜಿತ್ ಎನ್ನುವ ಯುವಕ ಈ ರೀತಿ ವಿಕೃತಿ ಎಸಗಿದ್ದಾನೆ. ಪೊಲೀಸ್ ಅಧಿಕಾರಿಗಳು ಅವರನ್ನು ವಾಹನದಿಂದ ತೆಗೆದುಹಾಕಲು ಪ್ರಯತ್ನಿಸಿದಾಗ, ಪರಿಸ್ಥಿತಿ ಉಲ್ಬಣಗೊಂಡು ಗುಂಪು ಘರ್ಷಣೆ ನಡೆದು ನಾಲ್ವರು ಪೊಲೀಸ್ ಅಧಿಕಾರಿಗಳು ಗಾಯಗೊಂಡರು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾತ್ರಿ 10:30ರ ಸುಮಾರಿಗೆ ಪೆರಮಂಗಲo ಪ್ರದೇಶದಲ್ಲಿ ಚರ್ಚ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬoಧ ಪೆರಮಂಗಲo ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related posts

Leave a Comment