Mangalore and Udupi news
Blogದೇಶ- ವಿದೇಶಪ್ರಸ್ತುತರಾಜ್ಯ

ಶಬರಿಮಲ ಯಾತ್ರೆ: ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಬಸ್ಸಿನಲ್ಲಿ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಬೇಡಿ – ಹೈಕೋರ್ಟ್ ಖಡಕ್ ಎಚ್ಚರಿಕೆ

ವರ್ಷಂಪ್ರತಿ ಶಬರಿ ಮಲೆಗೆ ಭಕ್ತಾದಿಗಳ ಆಗಮದ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದರಲ್ಲೂ ಮಕರ ಜ್ಯೋತಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ಮಣಿಕಂಠನ ದರ್ಶಕ್ಕೆ ಹೋಗುತ್ತಾರೆ. ಈಗಾಗಲೇ ಮಂಡಲ ಯಾತ್ರೆ ಆರಂಭವಾಗಿದ್ದು, ಶಬರಿಮಲೆಗೆ ದಿನಂಪ್ರತಿ ಲಕ್ಷ ಲಕ್ಷ ಭಕ್ತಾದಿಗಳು ತೆರಳಿ ಪುನೀತರಾಗುತ್ತಿದ್ದಾರೆ.

ಈ ನಡುವೆ ಕೇರಳ ಸಾರಿಗೆ ಸಂಸ್ಥೆಯನ್ನೇ ಅವಲಂಬಿಸಿ ಸಹಸ್ರಾರು ಮಂದಿ ಭಕ್ತರು ಶಬರಿಮಲೆಗೆ ತೆರಳುತ್ತಿದ್ದಾರೆ. ಈ ಕುರಿತು ದೂರುಗಳು ಬಂದಿದ್ದು, ಶಬರಿಮಲೆ ಸೇವೆಗಳ ಕುರಿತು ಕೇರಳ ಎಸ್‌ಆರ್‌ಟಿಸಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಬಸ್ಸಿನಲ್ಲಿ ಯಾತ್ರಾರ್ಥಿಗಳನ್ನು ತಡೆದು ಕರೆದುಕೊಂಡು ಹೋಗಬೇಡಿ ಎಂದು ಹೈಕೋರ್ಟ್ ಎಚ್ಚರಿಕೆಯನ್ನೂ ನೀಡಿದೆ.

Sabarimala KSRTC

ಶಬರಿಮಲೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ದೇವಸ್ವಂ ಪೀಠದ ಮುಂದೆ ಕೆಎಸ್‌ಆರ್‌ಟಿಸಿ ಸೇವೆ ವಿರುದ್ಧದ ಅರ್ಜಿಗಳು ಬಂದಿವೆ. ಇದನ್ನು ಪರಿಗಣಿಸಿದ ಹೈಕೋರ್ಟ್, ಕೆಎಸ್‌ಆರ್‌ಟಿಸಿ ಸೇವೆ ನಡೆಸುವಾಗ ಅನುಸರಿಸಬೇಕಾದ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚಿಸಿದೆ. ಕಾನೂನು ಉಲ್ಲಂಘನೆ ಗಮನಕ್ಕೆ ಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಹೇಳಿದೆ.

ಖಾಸಗಿ ವಾಹನಗಳಿಗೆ ನಿಗದಿತ ಸಮಯದಲ್ಲಿ ಪಂಪಾ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ನಿನ್ನೆ ಹೈಕೋರ್ಟ್ ಆದೇಶ ನೀಡಿತ್ತು. ಇದಾದ ಬಳಿಕ ಕೆಎಸ್‌ಆರ್‌ಟಿಸಿ ಯಾತ್ರಾರ್ಥಿಗಳನ್ನು ತುಂಬಿಕೊಂಡು ಶಬರಿಮಲೆಗೆ ಸಂಚಾರ ನಡೆಸುತ್ತಿದೆ ಎಂಬ ದೂರುಗಳೂ ಕೇಳಿ ಬಂದಿದ್ದವು. ಇದಾದ ಬಳಿಕ ಶಬರಿಮಲೆಗೆ ಯಾತ್ರಾರ್ಥಿಗಳನ್ನು ಕೂಡಿ ಹಾಕುವ ಕೆಎಸ್‌ಆರ್‌ಟಿಸಿ ಪದ್ಧತಿ ವಿರುದ್ಧ ನ್ಯಾಯಾಲಯ ಎಚ್ಚರಿಕೆಯನ್ನೂ ನೀಡಿತ್ತು.

KSRTC to start Volvo bus service for Sabarimala devotees from Bengaluru  from Dec 1

ಕರ್ನಾಟಕದಿಂದಲೂ ಐಷಾರಾಮಿ ಬಸ್ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿ ಸುದ್ದಿ ನೀಡಿದೆ. ರಾಜ್ಯ ರಾಜಧಾನಿಯಿಂದ ನೇರವಾಗಿ ಬಸ್ಸಿನ ವ್ಯವಸ್ಥೆ ಆರಂಭವಾಗಲಿದೆ.

ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿಯಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ಇದೇ ನವೆಂಬರ್ 29ರಿಂದ ಬೆಂಗಳೂರಿನಿAದ ಶಬರಿಮಲೆಗೆ ಬಸ್ ಸಂಚಾರ ಪ್ರಾರಂಭವಾಗಲಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತಾದಿಗಳು ತೆರಳುವ ಸೀಸನ್ ಇದಾಗಿದ್ದರಿಂದ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಿAದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್ಗೆ 1,750 ರೂ. ಪ್ರಯಾಣ ದರವನ್ನು ನಿಗದಿ ಮಾಡಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್ನಿಂದ ಶಾಂತಿನಗರಕ್ಕೆ ವೋಲ್ವೋ ಬಸ್ ಸಂಚಾರ ಮಾಡಲಿದೆ ಎಂದು ತಿಳಿಸಿದೆ. 

Related posts

Leave a Comment