Mangalore and Udupi news
ಅಪರಾಧದಕ್ಷಿಣ ಕನ್ನಡದೇಶ- ವಿದೇಶ

ಬಸ್ಸಿನಲ್ಲಿ ಚಿನ್ನದ ಸರ ಎಗರಿಸಿದ ಬಂಟ್ವಾಳದ ಮೂವರು ಕಳ್ಳಿಯರು ಅಂದರ್

ಹರಿಪಾಡ್: ಬಸ್ ಹತ್ತುವಾಗ ಮಹಿಳೆಯ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮನ್ನರಸಲ (Mannarasala Sree Nagaraja Temple) ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದ ಮಹಿಳೆಯೊಬ್ಬರ ಚಿನ್ನ ಸರ ಕದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿಗಳಾದ ಚೋಟಮ್ಮ(52), ಲಕ್ಷ್ಮಿ(37) ಮತ್ತು ಕೆಂಡಮ್ಮ(47) ಎಂಬುವರನ್ನು ಹರಿಪಾಡ್ ಪೊಲೀಸರು ಬಂಧಿಸಿದ್ದಾರೆ.

ಮನ್ನಾರಸಾಲ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ಕೊಲ್ಲಂ ಮೂಲದ ರಾಜಮ್ಮ ಎಂಬುವರ ಒಂದು ಮುಕ್ಕಾಲು ಪವನ್ ಚಿನ್ನದ ಸರವನ್ನು ಕದ್ದೊಯ್ದ ಘಟನೆ ಹರಿಪಾಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿತ್ತು.

ಬಸ್ ಹತ್ತುವಾಗ ಮೂವರು ಮಹಿಳೆಯರು ಕೈಚಳಕ ತೋರಿಸಿದ್ದಾರೆ. ಇದನ್ನು ಗಮನಿಸಿದ ರಾಜಮ್ಮ ಗಲಾಟೆ ಮಾಡಿದ್ದು, ಇತರೆ ಪ್ರಯಾಣಿಕರು ಯುವತಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ಬ್ಯಾಗ್‌ನೊಳಗೆ ಕಳ್ಳತನವಾದ ಸರ ಪತ್ತೆಯಾಗಿದೆ.

Haripad: Police have arrested three people from Dakshina Kannada district in connection with the case of a woman’s gold chain being stolen from a bus. Chotamma (52), Lakshmi (37) and Kendamma (47), residents of Bantwal, were arrested by the Haripad police.

The incident took place at Haripad KSRTC bus station where Rajamma from Kollam, who had come to visit the Mannarasala temple, stole a gold chain. 3 women were robbed while boarding the bus. Observing the robbery, Rajamma raised a ruckus and other passengers caught the young women and handed them over to the police. During inspection, the stolen chain was found inside the bag.

Related posts

Leave a Comment