Mangalore and Udupi news
ದಕ್ಷಿಣ ಕನ್ನಡ

ಪಣಂಬೂರು ಮಾಗಣೆ, ಕುಡುಂಬೂರು ಗುತ್ತು ಶ್ರೀ ಕ್ಷೇತ್ರ ಕನಿಲದಲ್ಲಿ ಮಾರ್ಚ್ 12 ರಿಂದ 15ರವರೆಗೆ ವಿಜೃಂಭಣೆಯ ವರ್ಷಾವಧಿ ಕನಿಲದಾಯನೋತ್ಸವ

(ಮಾ.12-15) ಕನಿಲದಾಯನ ವರ್ಷಾವಧಿ ಬಂಡಿ ನೇಮೋತ್ಸವ

ಸುರತ್ಕಲ್ : ಪಣಂಬೂರು ಮಾಗಣೆ ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ದೈವಸ್ಥಾನ ಕುಡುಂಬೂರು ಗುತ್ತು ಇಲ್ಲಿ ಮಾರ್ಚ್ 12ರಿಂದ 15ರವರೆಗೆ ಕನಿಲದಾಯನ ವರ್ಷಾವಧಿ ಬಂಡಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ದಿನಾಂಕ 12-03-2025ನೇ ಬುಧವಾರ ಮೊದಲ್ಗೊಂಡು ದಿನಾಂಕ 15-03-2025 ವರೆಗೆ ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ದೈವಗಳ ವರ್ಷಾವಧಿ ಬಂಡಿ ನೇಮೋತ್ಸವ ನಡೆಯಲಿದೆ.

ಕಾರ್ಯಕ್ರಮಗಳ ವಿವರ:
ತಾ. 12-03-2025ನೇ ಬುಧವಾರ ಬೆಳಿಗ್ಗೆ 9.00ಕ್ಕೆ ನವಕ ಪ್ರಧಾನ ರಾತ್ರಿ ಗಂಟೆ 9.00ಕ್ಕೆ ಕುಡುಂಬೂರು ಗುತ್ತು ದೈವ ಚಾವಡಿಯಿಂದ ಶ್ರೀ ಕನಿಲ ದೈವಸ್ಥಾನಕ್ಕೆ ಭಂಡಾರ ಏರಿಸುವುದು. ತಾ.13-03-2025 ರಾತ್ರಿ ಗಂಟೆ 9.00ಕ್ಕೆ ಮೈಸಂದಾಯ, ಕಾಂತೇರಿ ಧೂಮಾವತಿ ಬಂಟ ಮತ್ತು ಬಬ್ಬರ್ಯ ದೈವಗಳ ಬಂಡಿ ನೇಮೋತ್ಸವ.

ತಾ. 14-03-2025 ರಾತ್ರಿ ಗಂಟೆ 9.00ಕ್ಕೆ ಜಾರಂದಾಯ ಬಂಟ ಮತ್ತು ಸರಳ ಧೂಮಾವತಿ ಬಂಟ ದೈವಗಳ ಬಂಡಿ ನೇಮೋತ್ಸವ. ತಾ. 15-03-2025‌ ರಾತ್ರಿ ಗಂಟೆ 8.00ಕ್ಕೆ ಪಿಲಿಚಾಮುಂಡಿ ದೈವದ ಪಡಿಯರಿ ದರ್ಶನ, ಎಣ್ಣೆ ಬೂಳ್ಯ. ಮತ್ತು ಅನ್ನಸಂತರ್ಪಣೆ. ರಾತ್ರಿ ಗಂಟೆ 10.00ಕ್ಕೆ ಪಿಲಿಚಾಮುಂಡಿ ದೈವದ ಬಂಡಿ ನೇಮೋತ್ಸವ.

{“remix_data”:[],”remix_entry_point”:”challenges”,”source_tags”:[“local”],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{},”is_sticker”:false,”edited_since_last_sticker_save”:false,”containsFTESticker”:false}


Related posts

Leave a Comment