
ಬಂಟ್ವಾಳ : ಸೂಪರ್ ಬಝಾರ್ ಒಂದರ ಶಟರ್ ಬೀಗ ಮುರಿದು ಸಾವಿರಾರು ರೂ. ನಗದು ಕಳವು ಮಾಡಿದ ಘಟನೆ ಕಲ್ಲಡ್ಕ ಪೇಟೆಯಲ್ಲಿ ಮಂಗಳವಾರ ರಾತ್ರಿ ವೇಳೆ ನಡೆದಿದೆ.
ತೊಕೊಟ್ಟು – ಕಲ್ಲಾಪು ನಿವಾಸಿ ಅನ್ಸಾರ್ ಎಂಬವರ ಮಾಲಕತ್ವದ ಕಲ್ಕಡ್ಕ ಸೂಪರ್ ಬಝಾರ್ ಇದಾಗಿದ್ದು, ಮಂಗಳವಾರ ರಾತ್ರಿ ವೇಳೆ ಶಟರ್ ನ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಡ್ರಾಯರ್ ನಲ್ಲಿರಿಸಿದ್ದ ರೂ.58 ಸಾವಿರ ನಗದು ಕಳ್ಳತನ ಮಾಡಿದ್ದು, ಜೊತೆಗೆ ಅಂಗಡಿಯಲ್ಲಿರುವ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು ಮೂರು ತಿಂಗಳ ಹಿಂದೆ ಇಲ್ಲಿನ ಪ್ರಸಿದ್ಧ ಕೆ.ಟಿ.ಹೋಟೆಲ್ ನಿಂದ ಕಳ್ಳತನ ವಾಗಿದ್ದು, ಕಳವು ಮಾಡುವ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಕಲ್ಲಡ್ಕ ದಲ್ಲಿ ಅಂಗಡಿಯಿಂದ ಕಳ್ಳರ ಹಾವಳಿ ಶುರುವಾಗಿದ್ದು,ಕಲ್ಲಡ್ಕದ ಜನರನ್ನು ನಿದ್ದೆಗೆಡಿಸಿದೆ. ಕಳ್ಳತನದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.