ಇದು ಕರಾವಳಿಯ ಕಥೆ. ತುಳುನಾಡಿನ ಸೊಗಡಿನ ಕಥೆ. ಧರ್ಮದ ಹಾದಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ಘಟಿಸುವ ರೋಚಕ ಕಥೆಯೇ “ಕಲ್ಜಿಗ” ಸಿನಿಮಾ. ಮಂಗಳೂರಿನಲ್ಲಿ ಬಿಡುಗಡೆಗೊಂಡು ಭಾರೀ ಸಂಚಲನ ಮೂಡಿಸಿದ ಸಿನಿಮಾ “ಕಲ್ಜಿಗ”, ಸದ್ಯ ಬೆಂಗಳೂರಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ನೀವು ಸಿನೆಮಾ ನೋಡ್ಬೇಕಾ.??
ಕಲ್ಜಿಗ ಸಿನಿಮಾ ಜನವರಿ 5ರಂದು ಬೆಂಗಳೂರು ಚಾಮರಾಜಪೇಟೆ ಡಾ. ಅಂಬರೀಶ್ ಆಡಿಟೋರಿಯಂ ಥಿಯೇಟರ್ ನಲ್ಲಿ ಅದ್ಧೂರಿ ಬಿಡುಗಡೆಯಾಗಲಿದೆ. ಸ್ವಾಮಿ ಕೊರಗಜ್ಜ ದೈವದ ಕಾರ್ಣಿಕದ ಚಿತ್ರ ಇದಾಗಿದ್ದು ಸಿನಿಮಾ ಪ್ರಿಯರ ಮನ ಮುಟ್ಟಿದೆ. ಬೆಂಗಳೂರಿನ ಜನರಿಗೆ ಸಿನಿಮಾ ತೋರಿಸಲು ಚಿತ್ರತಂಡ ತಯಾರಾಗಿದ್ದು, ಇಂದೇ ಟಿಕೆಟ್ ಬುಕ್ಕಿಂಗ್ ಮಾಡಿ ಭಕ್ತಿ ಪ್ರಧಾನ ಚಲನಚಿತ್ರವನ್ನು ನೀವು ವೀಕ್ಷಿಸಿ. ಟಿಕೆಟ್ ಗಾಗಿ ತಕ್ಷಣ ಸಂಪರ್ಕಿಸಿ: 9591409076
ಕಲ್ಜಿಗ ಸಿನಿಮಾವನ್ನು ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ನಾಯಕನಾಗಿ ಹಾಗೂ ಸುಶ್ಮಿತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮಾನಸಿ ಸುಧೀರ್, ಜ್ಯೋತಿಷ್ ಶೆಟ್ಟಿ, ಗೋಪಿನಾಥ್ ಭಟ್, ಶೋಭರಾಜ್ ಪಾವೂರ್, ವಿಜಯ್, ಶ್ಲಾಘಾ ಸಾಲಿಗ್ರಾಮ ಮುಂತಾದವರು ತಾರಾಗಣದಲ್ಲಿದ್ದಾರೆ. ಹಂಸಲೇಖ ಸಂಗೀತ, ಸಚಿನ್ ಶೆಟ್ಟಿ ಛಾಯಾಗ್ರಹಣ ಸಿನಿಮಾಗಿದೆ.
ಈಗಾಗಲೇ ಚಿತ್ರ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ . ಬ್ಯಾಂಕಾಕ್ , ಕೆನಡಾ , ಬ್ರಿಟಿಷ್ ಕೊಲಂಬಿಯಾ ಹಾಗೂ ಮುಂಬೈಯಲ್ಲಿ ಅದ್ಧೂರಿಯಾಗಿ ಪ್ರದರ್ಶನ ಕಂಡಿದೆ . ಮುಂದಿನ ದಿನಗಳಲ್ಲಿ ಅಮೇರಿಕಾ , ಇಸ್ರೇಲ್ , ದುಬೈ , ಅಬುಧಾಬಿ , ಕತಾರ್ , ಕುವೈಟ್ , ಬಹ್ರೈನ್ , ಮಸ್ಕತ್ ಹಾಗೂ ಆಸ್ಟ್ರೇಲಿಯಾ ದೇಶದಲ್ಲಿ ಬಿಡುಗಡೆಗೆ ತಯಾರಾಗಿದೆ . ಈಗಾಗಲೇ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಯವರು ಕಲ್ಜಿಗ ಚಿತ್ರವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ವೀಕ್ಷಿಸಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ . ಕುಟುಂಬ ಸಮೇತರಾಗಿ ನೋಡುವ U ಸರ್ಟಿಫಿಕೇಟ್ ಚಿತ್ರ ಇದಾಗಿದೆ . ಕಲ್ಜಿಗ ಚಿತ್ರ ಇದೇ ಜನವರಿ 5 ರ ಭಾನುವಾರದಂದು ಬೆಂಗಳೂರಿನ ಚಾಮರಾಜಪೇಟೆಯ ಡಾ.ಅಂಬರೀಶ್ ಆಡಿಟೋರಿಯಂ ಥಿಯೇಟರ್ ನಲ್ಲಿ ಪ್ರದರ್ಶನ ಕಾಣಲಿದೆ .
