Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುತ್ತೂರು: ಪ್ರತ್ಯೇಕ ಪ್ರಕರಣ – ಮೂವರು ಖತರ್ನಾಕ್ ಕಳ್ಳಿಯರು ಅರೆಸ್ಟ್.!!

Advertisement

ಪುತ್ತೂರು : ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೂವರು ಕಳ್ಳಿಯರನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ ಶ್ರೀಮತಿ ಯಶೋದ ಹಾಗೂ ನೀರುಮಾರ್ಗ ಮಂಗಳೂರು ನಿವಾಸಿ ವಿದ್ಯಾ ಎಂದು ಗುರುತಿಸಲಾಗಿದೆ.

ಬೆಂಗಳೂರು ರಾಜಾಜಿನಗರ ನಿವಾಸಿಗಳಾದ ಜ್ಯೋತಿ ಹಾಗೂ ಯಶೋಧ ಮತ್ತು ದ.ಕ.ಜಿಲ್ಲೆಯ ಮಂಗಳೂರು ನೀರುಮಾರ್ಗ ನಿವಾಸಿ ವಿದ್ಯಾ ಬಂಧಿತ ಆರೋಪಿಗಳು.

ಪುತ್ತೂರು: ಚಿನ್ನಾಭರಣ ಕಳ್ಳತನ; ಮೂವರು ಆರೋಪಿಗಳ ಬಂಧನ

ಡಿ.12 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಸರಸ್ವತಿ ಎಂಬವರ ಬ್ಯಾಗಿನಿಂದ ಚಿನ್ನಾಭರಣಗಳು ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ ಯಶೋದ ಎಂಬವರುಗಳನ್ನು ದಸ್ತಗಿರಿ ಮಾಡಿ, ಅವರಿಂದ ಕಳವಾದ ರೂ 25,000/- ಮೌಲ್ಯದ ಚಿನ್ನಾಭರಣವನ್ನು ವಶಡಿಸಿಕೊಂಡಿರುತ್ತಾರೆ.

ಇನ್ನೊಂದು ಪ್ರಕರಣದಲ್ಲಿ ಡಿ.13 ರಂದು ಪುತ್ತೂರು ಪೇಟೆಯ ಕೋರ್ಟ್ ರಸ್ತೆಯಲ್ಲಿರುವ ಜ್ಯುವೆಲ್ಲರ್ಸ್ ಶಾಪ್ ನಿಂದ ಚಿನ್ನ ಖರೀದಿ ಮಾಡುವ ನೆಪದಲ್ಲಿ ಬಂದು, ರೂ 77000 /- ಮೌಲ್ಯದ 09 ಗ್ರಾಂ ತೂಕದ 03 ಚಿನ್ನದ ಉಂಗುರಗಳನ್ನು ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಜ್ಯುವೆಲ್ಲರ್ಸ್ ಮಾಲಕರಾದ ಶಿವಪ್ರಸಾದ್‌ ಭಟ್‌ ಎಂಬವರು ನೀಡಿದ ದೂರಿನ ಮೇರೆಗೆ, ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಂಗಳೂರು ನೀರುಮಾರ್ಗ ನಿವಾಸಿ ವಿದ್ಯಾ ಎಂಬವರನ್ನು ದಸ್ತಗಿರಿ ಮಾಡಿ, ಕಳವಾದ ಒಟ್ಟು ರೂ 77000 /- ಮೌಲ್ಯದ ಚಿನ್ನಾಭರಣವನ್ನು ವಶಡಿಸಿಕೊಳ್ಳಲಾಗಿದೆ.

Related posts

Leave a Comment