Mangalore and Udupi news
ದೇಶ- ವಿದೇಶಪ್ರಸ್ತುತ

ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಉಡಾವಣೆ

ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಉಡಾವಣೆಯಾಗಿ ಆಕಾಶ ಸೇರಿದೆ. ಜಪಾನ್ ವಿಜ್ಞಾನಿಗಳು ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಅಭಿವೃದ್ಧಿಪಡಿಸಿ ಉಡಾವಣೆ ಮಾಡಿದ್ದಾರೆ.

ಲಿಗ್ನೋಸ್ಯಾಟ್ (LignoSat) ಹೆಸರಿನ ಉಪಗ್ರಹವನ್ನು ಫ್ಲೋರಿಡಾದಲ್ಲಿರುವ ನಾಸಾ ಕೆನಡಿ ಸ್ಪೇಸ್ ಸೆಂಟರ್ ನಿಂದ ಉಡ್ಢಯನ ಮಾಡಲಾಗಿದೆ. ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿರಿಸಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿರುವುದು ಮತ್ತೊಂದು ವಿಶೇಷತೆ. ಈಗಾಗಲೇ ಅದು ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ತಲುಪಿದೆ. ಈ ಉಪಗ್ರಹವನ್ನು ಕ್ಯೋಟೋ ವಿಶ್ವವಿದ್ಯಾನಿಲಯದ (Kyoto University) ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ.

ಆರು ತಿಂಗಳವರೆಗೆ ಲಿಗ್ನೋಸ್ಯಾಟ್ ಬಾಹ್ಯಾಕಾಶದಲ್ಲಿ ಇರಲಿದೆ. ಇದರ ಉದ್ದೇಶವು ಬಾಹ್ಯಾಕಾಶದಲ್ಲಿರುವ ವಾತಾವರಣಕ್ಕೆ ಮರದ ಸ್ಯಾಟಲೈಟ್ ಹೇಗೆ ಒಗ್ಗಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದಾಗಿದೆ. ಜೊತೆಗೆ ಮುಂದಿನ 50 ವರ್ಷಗಳಲ್ಲಿ ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ಗಿಡಗಳನ್ನು ನೆಡುವ ಪ್ಲಾನ್‌ನ ಭಾಗವಾಗಿದೆ.

ಅಂಗೈ ಅಗಲದ ಸ್ಯಾಟಲೈಟ್
ಲಿಗ್ನೋಸ್ಯಾಟ್ ಅನ್ನು ಜಪಾನಿನ ಕ್ಯೋಟೋ ಯುನಿವರ್ಸಿಟಿಯ ವಿಜ್ಞಾನಿಗಳು ಸುಮಿಟೊಮೋ ಫಾರೆಸ್ಟಿç ಅವರ ಜೊತೆಗಾರಿಕೆಯಿಂದ ಅಭಿವೃದ್ಧಿಗೊಳಿಸಿದ್ದಾರೆ. ಲಿಗ್ನಮ್ ಅಂದರೆ ಲ್ಯಾಟಿನ್ ಭಾಷೆಯಲ್ಲಿ ಮರ ಎಂದರ್ಥ. ಹೀಗಾಗಿ ಲಿಗ್ನೋ ಸ್ಯಾಟ್ ಎಂದು ಹೆಸರಿಡಲಾಗಿದೆ. ಇದು ಅಂಗೈ ಅಗಲದ ಗಾತ್ರದಲ್ಲಿರುವು ವಿಶೇಷ.

ಜಪಾನ್ ಮಾಜಿ ಗಗನಯಾತ್ರಿ ಟಕಾವೊ ಡೋಯಿ ಅವರು ಹೇಳುವಂತೆ.. ನಾನು ಕೂಡ ವಿವಿಯ ಸಂಶೋಧನಾ ತಂಡದ ಭಾಗವಾಗಿದ್ದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮರವನ್ನು ಬಳಸಬಹುದೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಬೇಕಾಗಿದೆ. ಅದಕ್ಕಾಗಿಯೇ ನಾವು ಈ ಮರದ ಉಪಗ್ರಹವನ್ನು ತಯಾರಿಸಿದ್ದೇವೆ. ಅದಕ್ಕಾಗಿ ಮರವನ್ನು ಬಳಸಲಾಗಿದೆ ಎಂದಿದ್ದಾರೆ.

ಅರಣ್ಯ ವಿಜ್ಞಾನ ಪ್ರಾಧ್ಯಾಪಕ ಕೋಜಿ ಮುರಾಟಾ ಪ್ರತಿಕ್ರಿಯಿಸಿ.. ಮರದಿಂದ ಮಾಡಿದ ಸ್ಯಾಟಲೈಟ್ ಬಾಹ್ಯಾಕಾಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಅದು ಅಷ್ಟು ಸುಲಭದಲ್ಲಿ ಕೊಳೆಯುವುದಿಲ್ಲ, ಬೆಂಕಿ ಕೂಡ ತಾಗುವುದಿಲ್ಲ. ಉಪಗ್ರಹದಲ್ಲಿ ಬಳಸಲಾದ ಮರವು ಮ್ಯಾಗ್ನೋಲಿಯಾ ಮರದಿಂದ ನಿಂದ ಮಾಡಲಾಗಿದೆ. ಆ ಮರವು ತುಂಬಾನೇ ಗಟ್ಟಿಯಾಗಿದೆ. ಅಷ್ಟು ಸುಲಭದಲ್ಲಿ ನಾಶಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಂಶೋಧನೆ ಪ್ರಕಾರ, ಮರದ ಉಪಗ್ರಹಗಳು ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಪ್ರಯೋಜನಗಳನ್ನು ನೀಡಬಹುದು. ಇದರಿಂದ ಭೂಮಿಯ ವಾತಾವರಣಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇತರ ಉಪಗ್ರಹಗಳು ಸುಟ್ಟುಹೋದಾಗ ಮಾಲಿನ್ಯಕಾರಕ ಲೋಹದ ಕಣಗಳು ಬಿಡುಗಡೆಯಾಗುತ್ತವೆ.

ಭಾರತೀಯರ ವೈಮಾನಿಕ ಶಾಸ್ತ್ರಮ್ ಪ್ರೇರಣೆಯಾಯಿತಾ?
ಭಾರಧ್ವಜ ಮಹರ್ಷಿಗಳು ಬರೆದ ವೈಮಾನಿಕ ಶಾಸ್ತ್ರಮ್ ನಲ್ಲಿ ಹಲವು ವಿಮಾನಗಳ ಬಗ್ಗೆ ಉಲ್ಲೇಖವಿದೆ. ಇದರ ಭಾಷ್ಯವನ್ನು ಅನೇಕಲ್ ಸುಬ್ಬರಾಯ ಶಾಸ್ತಿçಗಳು ಬರೆದಿದ್ದರು. ಇದರಲ್ಲಿ ಹತ್ತಾರು ಲೋಹಗಳನ್ನು ಬಳಸಿಕೊಂಡು ವಿಮಾನಗಳ ರಚನೆಯ ಬಗ್ಗೆ ಉಲ್ಲೇಖವಿದೆ. ಹಾಗೂ ಆಕಾಶದಲ್ಲಿ ಗಮಿಸುವಾಗ ಯಾವೆಲ್ಲಾ ಮರಗಳ ಬಳಕೆ ಸೂಕ್ತ ಎಂಬ ಸಂಗತಿಯೂ ಅಡಗಿದೆ. ಆ ಮೂಲಕ ಭಾರತದಲ್ಲಿ ಮರಗಳನ್ನು ಕಟ್ಟಿಕೊಂಡು ಆಕಾಶ ನೌಕೆಗಳ ರೂಪುಗೊಂಡಿದ್ದವು. 1897ರಲ್ಲಿ ಶಿವ್ಕಾರ್ ಬಾಪೂಜಿ ತಾಳ್ಪಡೆ ವಿಮಾನ ಹಾರಾಟ ನಡೆಸಿದ್ದರು.

Japan launches world’s first wooden satellite, LignoSat, into space

The world’s first wooden satellite, LignoSat, was launched by Japanese scientists on Tuesday to understand the feasibility of timber in space.

Kyoto University and homebuilder Sumitomo Forestry jointly developed the wooden satellite, LignoSat, and sent it to the International Space Station (ISS) on a SpaceX mission. The satellite will be positioned approximately 400 kilometres above Earth.

Related posts

Leave a Comment