Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: “ಜನಸೇವಾ ಟ್ರೋಫಿ-2025” ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ

ಉಡುಪಿ : ಹಿಂದೂ ಜನ ಸೇವಾ ಟ್ರಸ್ಟ್ (ರಿ.) ಇವರ ಆಶ್ರಯದಲ್ಲಿ ಹಾಗೂ ಪ್ರಾಯೋಜಕತ್ವದಲ್ಲಿ ಬಡಜನರ ಸೇವೆಯ ಸಹಾಯಾರ್ಥವಾಗಿ ಮಹಿಳೆಯರ ತ್ರೋಬಾಲ್ ಮತ್ತು ವಾಲಿಬಾಲ್ ಹಾಗೂ ಪುರುಷರ ಹೊನಲು ಬೆಳಕಿನ ಗ್ರಾಮೀಣ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಕೂಟ ನಡೆಯಲಿದೆ.

“ಜನಸೇವಾ ಟ್ರೋಫಿ-2025” ಫೆಬ್ರವರಿ 08 2025 ರ ಶನಿವಾರ ದಿವ್ಯಸಾಗರ್ ಎಸ್ಟೇಟ್ ಮೈದಾನ, ಮುದ್ರಾಡಿ ಇಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶ್ರೀಗಳು, ಜಿಲ್ಲೆಯ ಶಾಸಕರು, ಉದ್ಯಮಿಗಳು, ದಾನಿಗಳು, ಸಿನೆಮಾ ತಾರೆಯರು ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.


ಹಿಂದೂ ಜನಸೇವಾ ಟ್ರಸ್ಟ್ (ರಿ.)

“ಪರೋಪಕಾರಾಯ ಪುಣ್ಯಾಯ” ಎಂಬ ಧೈಯ ವಾಕ್ಯವನ್ನು ಪಾಲಿಸುವ ನಿಟ್ಟಿನಲ್ಲಿ ರಚನೆಯಾದ ಸಂಸ್ಥೆ ಹಿಂದೂ ಜನ ಸೇವಾ ಟ್ರಸ್ಟ್. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಸಮಾಜದ ಮುಂಚೂಣಿಗೆ ತರುವ ಪ್ರಯತ್ನವೇ ಈ ಸಂಸ್ಥೆಯ ಮುಖ್ಯ ಕಾರ್ಯ ಚಟುವಟಿಕೆಗಳಲ್ಲಿ ಒಂದು.

ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ತಮ್ಮ ಸೇವಾ ತತ್ಪರತೆಯಿಂದ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರತಿ ಗ್ರಾಮ ಪಂಚಾಯತಿನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವವರನ್ನು ಹಾಗೂ ಸಮಾಜದಲ್ಲಿ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ನಡೆಸಿಕೊಂಡು ಬರುತ್ತಿರುವವರನ್ನು, ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಹಿಂದೂ ಜನ ಸೇವಾ ಟ್ರಸ್ಟ್ ಸಂಸ್ಥೆ ಮಾಡುತ್ತಿದೆ.

ಸಜ್ಜನ ಸಮಾಜ ಬಂಧುಗಳ ಹಾಗೂ ದಾನಿಗಳ ಸಹಕಾರದಿಂದ ಹಲವಾರು ಅಶಕ್ತ ಕುಟುಂಬಗಳಿಗೆ ನೆರವು ನೀಡುತ್ತಾ ಬಂದಿದೆ. ಈ ತನಕ ಈ ಸಂಸ್ಥೆಯಿoದ ನೆರವು ಪಡೆದವರ ಯಾವುದೇ ಛಾಯಾಚಿತ್ರಗಳನ್ನು ಎಲ್ಲಿಯೂ ಪ್ರದರ್ಶನ ಮಾಡುವುದಿಲ್ಲ ಎಂಬ ತೀರ್ಮಾನ ಅಚಲವಾಗಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮತ್ತು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುಕ್ತ ಶಿಕ್ಷಣ ನೀಡಬೇಕೆನ್ನುವ ಉದ್ದೇಶ ಈ ಸಂಸ್ಥೆಯದು. ಅದಕ್ಕಾಗಿ ಪ್ರತಿ ಹಳ್ಳಿಯಲ್ಲಿ ಮತ್ತು ನಗರಗಳಲ್ಲಿ ಕೂಡ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

ಅಶಕ್ತ ಕುಟುಂಬಗಳಿಗೆ ಮನೆ ನಿರ್ಮಾಣ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುವ ಮೂಲಕ ಅಂತಹ ಬಡ ಕುಟುಂಬಗಳ ಕಣ್ಣೀರು ಒರೆಸುವುದೇ ಇವರ ಗುರಿಯಾಗಿದೆ. 2025ನೇ ಸಾಲಿನಲ್ಲಿ ಸಹೃದಯಿ ದಾನಿಗಳ ಸಹಕಾರದಿಂದ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿ ರಾಜ್ಯದಲ್ಲಿ ಬಡ ಜನರಿಗೆ ನೆರವಾಗಬೇಕೆನ್ನುವುದು ಇವರ ಮಹಾದಾಸೆ. ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿ ಪ್ರಾರಂಭಿಸಿದ ಹಿಂದೂ ಜನ ಸೇವಾ ಟ್ರಸ್ಟ್ ವೇಗವಾಗಿ ರಾಜ್ಯ ವ್ಯಾಪಿ ಹಳ್ಳಿ ಹಳ್ಳಿಗಳಲ್ಲೂ ಕೂಡ ಕಾರ್ಯವೈಖರಿ ನಡೆಸುತ್ತಿದೆ.

Advertisement

Related posts

Leave a Comment