
ಹಾಸನ: ಅರಕಲಗೂಡು ತಾಲೂಕಿನ ಸುಳಗೂಡು ಗ್ರಾಮದಲ್ಲಿ ಜೈನ ತೀರ್ಥಂಕರ ಮೂರ್ತಿಗಳು ಪತ್ತೆಯಾಗಿವೆ. ಹೊಲದಲ್ಲಿ ಉಳುಮೆ ಮಾಡುವಾಗ ರೈತನ ಕಣ್ಣಿಗೆ ಜೈನ ಬಸದಿ, ಕಲ್ಲಿನ ವಿಗ್ರಹಗಳು ಕಂಡಿವೆ.
ಗಂಗರು ಹಾಗೂ ಚೋಳರ ಕಾಲದ ಶೈಲಿಯಲ್ಲಿ ಶಿಲೆಗಳನ್ನು ಕೆತ್ತಲಾಗಿದೆ. ಸುಳುಗೋಡು ಸೋಮವಾರ ಗ್ರಾಮದ ಮಂಜು ಎಂಬುವವರ ಜಮೀನಿನಲ್ಲಿ ಪತ್ತೆಯಾಗಿವೆ. ಶಿಲೆಗಳನ್ನು ವಸ್ತು ಸಂಗ್ರಾಹಲಯಕ್ಕೆ ಕಳುಹಿಸಲು ಗ್ರಾಮಸ್ಥರ ತೀರ್ಮಾನ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಕಲಗೂಡು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪರೂಪರ ಮೂರ್ತಿಗಳನ್ನು ನೋಡಿದ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎಷ್ಟು ವರ್ಷಗಳಿಂದ ಮಣ್ಣಿನಡಿ ಮೂರ್ತಿಗಳು ಹೂತು ಹೋಗಿದ್ದವೋ ಎಂದು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೇ ಸಿಕ್ಕಿರುವ ಬಸಿದಿ ಮೇಲೆ ಏನೆಂದು ಬರೆಯಲಾಗಿದೆ ಅನ್ನೂ ಕುತೂಹಲ ಕೂಡ ಹೆಚ್ಚಾಗಿದೆ.