ದೇಶದ ನಾನ ಪಟ್ಟಣಗಳಲ್ಲಿ ಗಾಳಿ ಗುಣಮಟ್ಟವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಾಯುಮಾಲಿನ್ಯದಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದೆ. ದೇಶದ ಪ್ರಮುಖ ನಗರಗಳು ವಾಸಿಸೋದಕ್ಕೆ ಅಯೋಗ್ಯವಾಗಿದೆ. ವಾಯು ಮಾಲಿನ್ಯದ ಗುಣಮಟ್ಟ ಕುಸಿತ ಕಂಡಿರುವುದರಿಂದ ಲಕ್ಷಾಂತರ ಮಂದಿ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ.
ದೇಶದ ಪ್ರಮುಖ ನಗರಗಳ ಗಾಳಿಮಟ್ಟವು ಕುಸಿತ ಕಾಣುವುದರಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಶುದ್ಧ ಗಾಳಿ ಸಿಗುವ ನಗರಗಳು ಯಾವುವು ಎಂಬ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ ಪರಿಶುದ್ಧ ಗಾಳಿ ಸಿಗುವ ದೇಶದ 13 ನಗರಗಳ ಪೈಕಿ ನಮ್ಮ ರಾಜ್ಯದ 7 ನಗರಗಳಿಗೆ ಸ್ಥಾನ ದೊರಕಿದೆ. ಅವುಗಳು ಯಾವುವು?
ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳು ವಾಯು ಮಾಲಿನ್ಯದಿಂದ ನಡುಗಿ ಹೋಗಿವೆ. ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟವು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕರ್ನಾಟಕದ 7 ನಗರಗಳು ಶುದ್ಧ ಗಾಳಿ ಸಿಗುವ ನಗರಗಳೆಂಬ ಸ್ಥಾನವನ್ನು ಪಡೆದುಕೊಂಡಿದೆ. ಆ ಮೂಲಕ ಕರ್ನಾಟಕದ ಪ್ರಮುಖ ನಗರಗಳಲ್ಲಿ ಜೀವಿಸಲು ಬೆಸ್ಟ್ ಎಂಬ ಅಚ್ಚರಿಯ ಮಾಹಿತಿ ಲಭ್ಯವಾಗಿದೆ.
ಇನ್ನು ಗಾಳಿಯ ಗುಣಮಟ್ಟ ಮಡಿಕೇರಿಯದ್ದು ಅತ್ಯುತ್ತಮವಾಗಿದೆ. ಗಾರ್ಡನ್ ಸಿಟಿ ಬೆಂಗಳೂರಿಗೆ ಈ ಪೈಕಿ ಸ್ಥಾನ ಸಿಗದಿದ್ದರೂ ಕರ್ನಾಟಕದ ಚಾಮರಾಜನಗರ, ಬಾಗಲಕೋಟೆ, ಹಾವೇರಿ, ಕೋಲಾರ, ಮಡಿಕೇರಿ, ಮಂಗಳೂರು ಮತ್ತು ವಿಜಯಪುರ ಈ ಏಳು ನಗರಗಳು ಶುದ್ಧ ಗಾಳಿ ಹೊಂದಿರುವ ನಗರಗಳೆಂಬ ಬಿರುದನ್ನು ಪಡೆದುಕೊಂಡಿದೆ.
Rank | City | State/UT | AQI Category | AQI Value | Primary Pollutant |
1 | Madikeri | Karnataka | Good | 31 | PM2.5 |
2 | Aizawl | Mizoram | Good | 34 | PM10 |
3 | Vijayapura | Karnataka | Good | 37 | PM2.5 |
4 | Kannur | Kerala | Good | 37 | PM10 |
5 | Shillong | Meghalaya | Good | 42 | O3 |
6 | Chamarajanagar | Karnataka | Good | 42 | PM10 |
7 | Bagalkot | Karnataka | Good | 42 | PM10 |
8 | Kalaburagi | Karnataka | Good | 43 | CO |
9 | Nagaon | Assam | Good | 44 | PM2.5 |
10 | Kolar | Karnataka | Good | 50 | PM10 |