ಗ್ಲೋಬಲ್ ಫೈರ್ ಪವರ್ ಎಂಬ ಸಂಸ್ಥೆ ಮಿಲಿಟರಿ ಶಕ್ತಿಯ ಆಧಾರದ ಮೇಲೆ ವಿಶ್ವದ ದೇಶಗಳಿಗೆ ಟಾಪ್ ರ್‍ಯಾಕಿಂಗ್ ಪಟ್ಟಿ ನೀಡಿದೆ. ಗ್ಲೋಬರ್ ಫೈರ್ ಪವರ್ ಹೊಸ ಪಟ್ಟಿ ರಿಲೀಸ್ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತ ವಿಶ್ವದ ಬಲಿಷ್ಠ ಸೇನೆಗಳ ಪೈಕಿ ೪ನೇ ಸ್ಥಾನದಲ್ಲಿದೆ.
ಬಲಿಷ್ಠ ಸೇನೆಗಳ ಪಟ್ಟಿಯಲ್ಲಿ ಅಮೆರಿಕ ನಂ.೧ ಸ್ಥಾನದಲ್ಲಿದ್ದರೆ ರಷ್ಯಾ ಎರಡನೇ ಸ್ಥಾನದಲ್ಲಿದೆ. ಚೀನಾ ಮೂರನೇ ಸ್ಥಾನದಲ್ಲಿದ್ದು ಪಾಕಿಸ್ತಾನ ೧೨ನೇ ಸ್ಥಾನಕ್ಕೆ ಕುಸಿದಿದೆ.
ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ ಪ್ರಕಾರ ಭಾರತ ವಿಶ್ವದ ಟಾಪ್-೫ ಶಕ್ತಿಶಾಲಿ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿದೆ. ಗ್ಲೋಬಲ್ ಫೈರ್ ಪವರ್ ಸೂಚ್ಯಂಕವು, ಮಿಲಿಟರಿ ಘಟಕಗಳು, ರ‍್ಥಿಕ ಸ್ಥಿತಿ, ಲಾಜಿಸ್ಟಿಕ್ಸ್ ಸಾರ‍್ಥ್ಯ ಸೇರಿ ೬೦ಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಿ ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ.
ಭಾರತದ ವಾಯುಪಡೆಯು ವಿಶ್ವದಲ್ಲೇ ೪ನೇ ಸ್ಥಾನದಲ್ಲಿದೆ. ಭಾರತದ ನೌಕಾಪಡೆ ವಿಶ್ವದಲ್ಲೇ ೬ನೇ ಸ್ಥಾನದಲ್ಲಿದೆ.