
ಬಂಟ್ವಾಳ : ಮಸೀದಿ ಅಕ್ರಮ ಕಟ್ಟಡ ನಿರ್ಮಿಸಿರುವ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಕರಿಯಂಗಳ ಪು0ಚಮೆಯಲ್ಲಿ ಸರ್ವೇ ನಂಬರ್ 152/2ಂ2 -0.20 ಜಾಗದಲ್ಲಿ ಅಕ್ರಮ ಕಟ್ಟಡ ಮಸೀದಿ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಿಲಾಗಿದೆ.
ಯಾವುದೇ ರೀತಿಯ ಅನುಮತಿ ಇಲ್ಲದೆಯೇ ಮಸೀದಿ ನಿರ್ಮಿಸುತ್ತಿದ್ದು ಇದರ ಬಗ್ಗೆ ಈ ಮೊದಲೇ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಸದ್ಯ ಸ್ಥಳೀಯರು ಗ್ರಾಮ ಪಂಚಾಯಿತ್ ಗೆ ಮುತ್ತಿಗೆ ಹಾಕಿ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ಯಶವಂತ್ ಪೊಳಲಿ, ರೋಶನ್ ಅಮೀನ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.